HEALTH TIPS

ಜಮ್ಮು-ಕಾಶ್ಮೀರ: ಟಿಫನ್ ಬಾಕ್ಸ್‌ನಲ್ಲಿ ಇಟ್ಟಿದ್ದ 4 ಐಇಡಿ, 2 ಡಜನ್ ಬುಲೆಟ್ ವಶ

               ಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಟಿಫನ್ ಬಾಕ್ಸ್‌ನಲ್ಲಿ ಅಳವಡಿಸಲಾಗಿದ್ದ 4 ಸುಧಾರಿತ ಸ್ಫೋಟಕ ಸಾಧನ(ಐಇಡಿ) ಮತ್ತು 2 ಡಜನ್ ಎ.ಕೆ ಸರಣಿಯ ಬಂದೂಕಿನ ಬುಲೆಟ್‌ಗಳನ್ನು ಸಿಆರ್‌ಪಿಎಫ್ ವಶಪಡಿಸಿಕೊಂಡಿದೆ.

            ಜಮ್ಮು ವಲಯದ ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಪ್ಯಾರಾ ಮಿಲಿಟರಿ ಪಡೆ ಈ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿತ್ತು.

              ಸಿಆರ್‌ಪಿಎಫ್‌ನ 237ನೇ ಬೆಟಾಲಿಯನ್‌ನ ಸಿ ಕಂಪನಿ ಪಡೆಗಳುಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹಯತ್‌ಪುರ-ಮಂಜಕೋಟ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆದಿದೆ.

             4 ಐಇಡಿಗಳನ್ನು ಟಿಫನ್‌ ಬಾಕ್ಸ್‌ನಲ್ಲಿ ಅಳವಡಿಸಲಾಗಿತ್ತು. ಎ.ಕೆ ಸರಣಿಯ ಬಂದೂಕಿನ 23 ಜೀವಂತ ಗುಂಡುಗಳು, ವೈರ್‌ಲೆಸ್ ಉಪಕರಣ ಮತ್ತು ಟೇಪ್‌ರೆಕಾರ್ಡರ್ ಅನ್ನು ವಶಕ್ಕೆ ಪಡೆಯಲಾಗಿದೆ.

ಪೂಂಚ್-ರಜೌರಿ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಕಳೆದೆರಡು ವರ್ಷಗಳಿಂದ ಇಲ್ಲಿ ಪಾಕಿಸ್ತಾನಿ ಉಗ್ರರ ಉಪಟಳ ಹೆಚ್ಚಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಈ ವಲಯದಲ್ಲಿ ಕೇಂದ್ರ ಸರ್ಕಾರವು ಸಿಆರ್‌ಪಿಎಫ್‌ ಅನ್ನು ನಿಯೋಜಿಸಿದೆ.

                  ಸೇನೆ ಮತ್ತು ರಾಷ್ಟ್ರೀಯ ರೈಫಲ್ ಪಡೆಯನ್ನೂ ಸಹ ಈ ವಲಯದಲ್ಲಿ ನಿಯೋಜಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries