HEALTH TIPS

'ವೈಬ್ರಂಟ್‌ ಗುಜರಾತ್' ಶೃಂಗಸಭೆ: ವಸ್ತು ಪ್ರದರ್ಶನಕ್ಕೆ ಪ್ರಧಾನಿ ಮೋದಿ ಚಾಲನೆ

              ಗಾಂಧಿನಗರ: 'ವೈಬ್ರಂಟ್ ಗುಜರಾತ್' ಜಾಗತಿಕ ಶೃಂಗಸಭೆ ಅಂಗವಾಗಿ ಏರ್ಪಡಿಸಿರುವ ಜಾಗತಿಕ ವಸ್ತು ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು.

             ಹೆಲಿಪ್ಯಾಡ್‌ ಗ್ರೌಂಡ್‌ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸುಮಾರು 2 ಲಕ್ಷ ಚದರ ಮೀ. ವಿಸ್ತೀರ್ಣದಷ್ಟು ವಿಶಾಲ ಜಾಗದಲ್ಲಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ.

            'ವೈಬ್ರಂಟ್ ಗುಜರಾತ್' ಶೃಂಗಸಭೆಯನ್ನು ಪ್ರಧಾನಿ ಅವರು ಬುಧವಾರ ಉದ್ಘಾಟಿಸಲಿದ್ದಾರೆ. ಜ.12ರ ವರೆಗೆ ನಡೆಯಲಿರುವ ಶೃಂಗಸಭೆಯಲ್ಲಿ 20 ರಾಷ್ಟ್ರಗಳು ಪಾಲ್ಗೊಳ್ಳಲಿವೆ.

             ಮಧ್ಯಾಹ್ನ 3ಕ್ಕೆ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಜತೆ ಮಳಿಗೆಗಳಿಗೆ ಭೇಟಿ ನೀಡಿದರು. ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರಧಾನಿ ಹಾಗೂ ಇತರ ಗಣ್ಯರಿಗೆ ಸ್ವಾಗತ ಕೋರಿದರು.

             ಆಸ್ಟ್ರೇಲಿಯಾ, ತಾಂಜಾನಿಯ, ಮೊರೊಕ್ಕೊ, ಮೊಜಾಂಬಿಕ್, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಎಸ್ಟೋನಿಯ, ಬಾಂಗ್ಲಾದೇಶ, ಸಿಂಗಪುರ, ಯುಎಇ, ಯುಕೆ, ಜರ್ಮನಿ, ನಾರ್ವೆ, ಫಿನ್ಲೆಂಡ್, ನೆದರ್ಲೆಂಡ್ಸ್, ರಷ್ಯಾ, ರುವಾಂಡ, ಜಪಾನ್, ಇಂಡೊನೇಷ್ಯಾ ಮತ್ತು ವಿಯೆಟ್ನಾಂ ದೇಶಗಳು ತಮ್ಮಲ್ಲಿನ ಹೊಸ ತಂತ್ರಜ್ಞಾನ ಹಾಗೂ ಕೈಗಾರಿಕೆಗಳ ಕುರಿತ ಮಾಹಿತಿಯನ್ನು ಈ ವಸ್ತು ಪ್ರದರ್ಶನದ ಮೂಲಕ ಪ್ರಸ್ತುತಪಡಿಸುತ್ತಿವೆ.

           ಈ ದೇಶಗಳ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ 1,000 ಕಂಪನಿಗಳು ಪಾಲ್ಗೊಂಡಿವೆ. ವಸ್ತು ಪ್ರದರ್ಶನದಲ್ಲಿ ಮಹಿಳಾ ಸಬಲೀಕರಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಅಭಿವೃದ್ಧಿ, ಹೊಸ ತಂತ್ರಜ್ಞಾನ, ಹಸಿರು ಮತ್ತು ಸ್ಮಾರ್ಟ್‌ ಮೂಲಸೌಕರ್ಯ ಹಾಗೂ ಸುಸ್ಥಿರ ಇಂಧನ ಕ್ಷೇತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ.

            ಮೂರು ದಿನ ನಡೆಯಲಿರುವ ಶೃಂಗಸಭೆ ವೇಳೆ ಪ್ರಧಾನಿ ಅವರು ವಿಶ್ವದ ವಿವಿಧ ನಾಯಕರು, ಪ್ರಮುಖ ಜಾಗತಿಕ ಕಂಪನಿಗಳ ಸಿಇಒಗಳ ಜೊತೆಗೆ ಮಾತುಕತೆ ನಡೆಸಲಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries