HEALTH TIPS

ಉಗ್ರ ಸಂಘಟನೆ ಸ್ಥಾಪನೆಗೆ ಯೋಜನೆ: ಇಬ್ಬರ ಬಂಧನ

             ಖನೌ: 'ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಐಎಸ್‌ ಪ್ರೇರಿತ ಉಗ್ರ ಸಂಘಟನೆ ಸ್ಥಾಪನೆಗೆ ಮುಂದಾಗಿದ್ದ ಆರೋಪದಡಿ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದೆ' ಎಂದು ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ತಿಳಿಸಿದೆ.

           ಎಎಂಯುನ ಹಳೆಯ ವಿದ್ಯಾರ್ಥಿ, ಪ್ರಯಾಗ್‌ರಾಜ್‌ ಮೂಲದ ಅಮಾಸ್‌ ಅಹ್ಮದ್‌ ಅಲಿಯಾಸ್‌ ಫರಾಜ್‌ ಅಹ್ಮದ್‌ ಎಂಬುವರನ್ನು ಎಟಿಎಸ್‌ ಅಧಿಕಾರಿಗಳು ಸೋಮವಾರ ಬಂಧಿಸಿದ್ದರು.

             ವಿ.ವಿಯಲ್ಲಿ ಸಮಾಜಕಾರ್ಯ (ಎಂಎಸ್‌ಡಬ್ಲ್ಯು) ವಿಭಾಗದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಸಂಭಾಲ್‌ ಮೂಲದ ಅಬ್ದುಲ್‌ ಸಮದ್‌ ಮಲಿಕ್‌ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ.

               'ಇಬ್ಬರೂ ಐಎಸ್‌ ಸಿದ್ದಾಂತದಿಂದ ಪ್ರಭಾವಿತರಾಗಿ ದೇಶದಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸಲು ಯೋಜಿಸಿದ್ದರು' ಎಂದು ಎಟಿಎಸ್‌ ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries