ಮಂಜೇಶ್ವರ: ಕಣ್ವತೀರ್ಥ ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯವನ್ನು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಅನುಗ್ರಹ ದೊಂದಿಗೆ ಸಂಪೂರ್ಣಗೊಳಿಸಿ ದೇವರಿಗೆ ಸಮರ್ಪಿಸಲಾಗಿದ್ದು, ಜೀರ್ಣೋದ್ದಾರದ ನೇತೃತ್ವವಹಿಸಿದ ಅರಿಬೈಲು ನೆತ್ಯ ಗೋಪಾಲ ಶೆಟ್ಟಿ ದಂಪತಿಗಳನ್ನು ಮತ್ತು ಅವರ ಪುತ್ರ, ಸಿವಿಲ್ ಇಂಜಿನಿಯರ್ ಆದರ್ಶ ಶೆಟ್ಟಿ ಅವರನ್ನು ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹಿಸಿ ಸನ್ಮಾನಿಸಿದರು. ಗೋಪಾಲ ಶೆಟ್ಟಿ ಯವರಿಗ ಫಲ ಪುಷ್ಪ ಮತ್ತು ಬಂಗಾರದ ಕಡಗ ವನ್ನು ಕೊಟ್ಟು ಗೌರವಿಸಲಾಯಿತು.
ಸೋಮವಾರ ಕಣ್ವತೀರ್ಥಕ್ಕೆ ಆಗಮಿಸಿದ್ದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ನೂತನ ಸುತ್ತುಪೌಳಿಯನ್ನು ಲೋಕಾರ್ಪಣೆಗೊಳಿಸದರು. ಮೊಕ್ಕಾಂ ಹೂಡಿದ್ದ ಶ್ರೀಗಳು, ಮಂಗಳವಾರ ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ತೆರಳಿದರು.


