ಕಾಸರಗೋಡು: ಪ್ರೆಸ್ ಕ್ಲಬ್ ವತಿಯಿಂದ ನೀಡುವ ಈ ವರ್ಷದ ಕೆ.ಕೃಷ್ಣನ್ ಸ್ಮಾರಕ ಸ್ಥಳೀಯ ಪತ್ರಕರ್ತ ಪ್ರಶಸ್ತಿಗೆ ಮಲಯಾಳ ಮನೋರಮಾ ಉಳಿಕಲ್ ವರದಿಗಾರ ಪಿ.ಸಿ.ಗೋವಿಂದನ್ ಆಯ್ಕೆಯಾಗಿದ್ದಾರೆ.
ಗೋವಿಂದನ್ ಅವರಿಗೆ 2023 ಅ. 23ರಂದು ಪ್ರಕಟವಾದ ವಿಶೇಷ ಸುದ್ದಿಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಸ್ಥಳೀಯ ಪತ್ರಕರ್ತರಿಂದ ಅತ್ಯುತ್ತಮ ಮಾನವ ಆಸಕ್ತಿದಾಯಕ ವಿಶೇಷ ಸುದ್ದಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಹಿರಿಯ ಪತ್ರಕರ್ತ ಕೆ.ವಿನೋದಚಂದ್ರನ್ ಮತ್ತು ಕಾಸರಗೋಡು ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಅವರನ್ನೊಳಗೊಂಡ ತೀರ್ಪುಗಾರರ ತಂಡ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.
ಫೆ.3ರಂದು ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ ನಡೆಯಲಿರುವ ಕೆ. ಕೃಷ್ಣನ್ ಸಂಸ್ಮರಣಾ ಸಮಾರಂಭದಲ್ಲಿ 10,000 ರೂಪಾಯಿ ಹಾಗೂ ಫಲಕವನ್ನು ಒಳಗೊಂಡ ಪ್ರಶಸ್ತಿಯನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


