ಕಾಸರಗೋಡು: ಚಲನ ಚಿತ್ರನಟ, ಕಾಸರಗೋಡಿನ ಹಿರಿಯ ರಂಗ ನಿರ್ದೇಶಕ, ಕೊಂಕಣಿ ಅಕಡಮಿ ಮಾಜಿ ಅಧ್ಯಕ್ಷಕಾಸರಗೋಡು ಚಿನ್ನಾ ವರಇಗೆ 2023ನೇ ಸಾಲಿನ ಡಾ. ವಿ. ದಯನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಠ ಪುರಸ್ಕಾರ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಒಂದು ಲಕ್ಷ ರೂ. ನಗದು, ಪ್ರಶಸ್ತಿಫಲಕ, ಸ್ಮರಣಿಕೆ ಹೊಂದಿದ್ದು, ಪ್ರಶಸ್ತಿಪ್ರದಾನ ಸಮಾರಂಭ ಫೆ. 11ರಂದು ಮಂಗಳುರು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಲಿದೆ. ಕಾಸರಗೋಡು ಚಿನ್ನಾ ವರು ಕಳೆದ ಐದು ದಶಕಗಳಿಂದ ಕನ್ನಡ, ತುಳು, ಕೊಂಕಣಿ, ಮಲಯಾಳ ಭಾಷೆಗಳ ರಂಗಬೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದಲ್ಲದೆ, ಹಲವಾರು ನಾಟಕಗಳನ್ನು ವಿವಿಧ ಭಾಷೆಗಳಿಗೆ ಅನುವಾದಿಸಿದ್ದಾರೆ. ಜತೆಗೆ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುವ ಮೂಲಕ ಮುಮದಿನ ತಲೆಮಾರಿಗೆ ರಂಗಭೂಮಿಯ ಅಭಿರುಚಿ ಮೂಡಿಸಿದ್ದಾರೆ. ಇವರು ನಿದೇಸಿಸಿರುವ ನಾಟಕಗಳು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ. ವಿದೇಸದಲ್ಲೂ ನಾಟಕ ಪ್ರದಸ್ನ ನಡೆಸಿರುವ ಇವರು ಮೂಕಾಭಿನಯದಲ್ಲೂ ಪರಿಣತರಾಗಿದ್ದಾರೆ. ಇವರು ನಿರ್ದೇಶಿಸಿರುವ ಕೊಂಕಣಿ ಚಲನಚಿತ್ರ'ಉಜ್ವಾಡು'ಗೆ ಕನಾಟಕ ರಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರಕ್ಕಿರು ವಪ್ರಶಸ್ತಿ ಜತೆಗೆ ಉತ್ತಮ ನಿರ್ದೇಶಕಗಿರು ಪ್ರಶಸ್ತಿಯೂ ಲಭಿಸಿದೆ.
ಅಕಾಶವಣಿಯ ಮೂರು ಭಾಷೆಗಳಲ್ಲಿ 'ಬಿ'ಹೈಗ್ರೇಡ್ ಕಲಾವಿದರಾದ ಕಾಸರಗೋಡು ಚಿನ್ನ ಅವರಿಗೆ ಕೇರಳ ಸಂಗೀತ ನಾಟಕ ಅಕಡಮಿ, ಕೇರಳ ರಾಜ್ಯೋತ್ಸವ ಪ್ರಶಸ್ತಿ, ಕನಾಟಕ ನಾಟಕ ಅಕಾಡಮಿ, ಕೊಂಕಣಿ ಸಾಹಿತ್ಯ ಅಕಾಡಮಿ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಏರಿದಂತೆ ನೂರಾರು ಪ್ರಶಸ್ತಿಗಳು ಲಭಿಸಿದೆ.


