ಕಾಸರಗೋಡು: ನಗರದ ರೈಲ್ವೆ ನಿಲ್ದಾಣದಿಂದ ಅನತಿ ದೂರದ ಪಳ್ಳಂ ರೈಲ್ವೆ ಹಳಿಯಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದ್ದು, ನಿಗೂಢತೆಗೆ ಕಾರಣವಾಗಿದೆ. ರೈಲು ಡಿಕ್ಕಿಯಾಗಿ ಸಾವು ಸಂಭವಿಸಿರಬನೇಕೆಂದು ಸಂಶಯಿಸಲಾಗಿದೆ. ಇವರ ವಶದಲ್ಲಿದ್ದ ಎರಡು ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ. ಇದು ಕಳವುಗೈದ ಮೊಬೈಲ್‍ಗಳಾಗಿದೆ ಎಂದು ಸಂಶಯಿಸಲಾಗಿದೆ.
ನೆಲ್ಲಿಕಟ್ಟೆಯ ಚೂರಿಪಳ್ಳ ನಿವಾಸಿ ಮಹಮ್ಮದ್ ಶಹೀರ್ ಹಾಗೂ ನೆಕ್ರಾಜೆ ನಿವಾಸಿ ಮಹಮ್ಮದ್ ಸಾಹಿರ್ ಮೃತಪಟ್ಟವರು. ಇವರಲ್ಲಿ ಮಹಮ್ಮದ್ ಶಹೀರ್ ವಿರುದ್ಧ ಮೊಬೈಲ್ ಕಳವುಗೈದ ಬಗ್ಗೆ ಪ್ರಕರಣಗಳಿರುವುದಾಗಿ ಮಾಹಿತಿಯಿದೆ. ಎರಡೂ ಮೃತದೇಹಗಳೂ ಆಸುಪಾಸು ಪತ್ತೆಯಾಗಿದೆ.
ತಮಿಳ್ನಾಡು ನಿವಾಸಿಗಳಾದ ಗಣೇಶ್ ಹಾಗೂ ಬಾಲಕೃಷ್ಣನ್ ಎಂಬವರ ಎರಡು ಮೊಬೈಲ್ ಫೋನ್ ಸೋಮವಾರ ರಾತ್ರಿ ಕಳವಾಗಿರುವ ಬಗ್ಗೆ ನಗರಠಾಣೆ ಪೊಲೀಸರಿಗೆ ಮಂಗಳವಾರ ಬೆಳಗ್ಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿರುವ ಮಧ್ಯೆ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇವರ ವಶದಲ್ಲಿದ್ದ ಎರಡು ಮೊಬೈಲ್ ಗಣೇಶ್ ಹಾಗೂ ಬಾಲಕೃಷ್ಣನ್ ಅವರ ಕೊಠಡಿಯಿಂದ ಕಳವುಗೈದಿರುವುದು ಎಂದು ಪತ್ತೆಹಚ್ಚಲಾಗಿದೆ. ನಗರಠಾಣೆ ಪೊಲೀಸರು ಕೇಸು ದಾಕಲಿಸಿಕೊಂಡಿದ್ದಾರೆ.


