ಕಾಸರಗೋಡು: ಕಾವೇರುತ್ತಿರುವ ಬಿಸಿಲಿನ ಬೇಗೆಯ ಜತೆಗೆ ಕೇರಳಾದ್ಯಂತ ಎಸ್ಸೆಸೆಲ್ಸಿ ಪರೀಕ್ಷೆ ಸೋಮವಾರ ಆರಂಭಗೊಂಡಿತು. ಕಾಸರಗೋಡಿನ ಎರಡು ಶೈಕ್ಷಣಿಕ ಜಿಲ್ಲೆಯ 157ಕೇಂದ್ರಗಳಲ್ಲಿ 20667ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ11529ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಲ್ಲಿ 6050ಮಂದಿ ಬಾಲಕರು ಹಾಗೂ 5479ಮಂದಿ ಬಾಲಕಿಯರಾಗಿದ್ದಾರೆ.
ಹೊಸದುರ್ಗ ಶೈಕ್ಷಣಿಕ ಜಿಲ್ಲೆಯಲ್ಲಿ 4685 ಬಾಲಕರು, 4359ಬಾಲಕಿಯರು ಸೇರಿದಂತೆ 9044ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ಅತ್ಯಧಿಕ ಅಂದರೆ ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ601ಮಂದಿ ವಿದ್ಯಾರ್ಥಿಗಳಿದ್ದರೆ, ಮೂಡಂಬೈಲು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅತ್ಯಂತ ಕಡಿಮೆ ಅಂದರೆ 26ಮಂದಿ ವಿದ್ಯಾರ್ಥಿಗಳುಪರೀಕ್ಷೆ ಬರೆಯುತಿದ್ದಾರೆ. ಅನುದಾನಿತ ಶಾಲಾ ವಿಭಾಗದಲ್ಲಿ ಗರಿಷ್ಟ ನಾಯಮರ್‍ಮೂಲೆ ಟಿಎಚ್‍ಎಸ್‍ಎಸ್‍ನಲ್ಲಿ 806ಮಂದಿಯಿದ್ದರೆ, ಕನಿಷ್ಠ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 19ಮಂದಿಯಿದ್ದಾರೆ. ಅನುದಾನರಹಿತ ಶಾಲೆಗಳಲ್ಲಿ ಗರಿಷ್ಠ ಚಟ್ಟಂಚಾಲ್ ಎಂಐಸಿ ಶಾಲೆಯಲ್ಲಿ 458ಮಂದಿಯಿದ್ದರೆ, ಕನಿಷ್ಠ ಮುಜೂಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಐದು ಮಂದಿಯಿದ್ದಾರೆ.




