ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವದ್ಧಿ ಅಂಗವಾಗಿ ಚೆರ್ಕಳ ಪೇಟೆಯಲ್ಲಿ ಹೊಂಡ ಅಗೆದು ನಿರ್ಮಿಸುತ್ತಿರುವ ಸರ್ವಿಸ್ ರಸ್ತೆಯನ್ನು ಪ್ರಸಕ್ತ ಇರುವ ರಸ್ತೆ ಮಟ್ಟಕ್ಕೆ ಅನುಗುಣವಾಗಿ ನಿರ್ಮಿಸುವಂತೆ ಆಗ್ರಹಿಸಿ ಚೆರ್ಕಳ ಜನಪರ ಒಕ್ಕೂಟದ ನೇತೃತ್ವದಲ್ಲಿ ವ್ಯಾಪಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ವತಿಯಿಂದ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಯಿತು..
ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖಾದರ್ ಬದರಿಯಾ ಅಧ್ಯಕ್ಷತೆ ವಹಿಸಿದ್ದರು. ವ್ಯಾಪಾರಿ ವ್ಯಾಪಾರಿ ಏಕೋಪನಾ ಸಮಿತಿ ಜಿಲ್ಲಾಧ್ಯಕ್ಷ ಕೆ.ಅಹ್ಮದ್ ಷರೀಫ್, ಅಬ್ದುಲ್ಲಾ ಕುಞÂ ಚೆರ್ಕಳ, ಜಲೀಲ್ ಎರುದುಂಕಡವು, ಎ.ನಾರಾಯಣನ್, ಎಆರ್.ಧನ್ಯವಾದ್, ನಾಸರ್ ಚೆರ್ಕಳಂ, ಹಾರಿಸ್ ತಾಯಲ್, ಮೂಸಾ ಬಿ ಚೆರ್ಕಳ, ಮುತಾಲಿಬ್ ಬೇರ್ಕ, ಹಸೀನಾ ರಶೀದ್ ಉಪಸ್ಥಿತರಿದ್ದರು. ವ್ಯಾಪಾರಿ ವ್ಯಯಸಾಯಿ ಏಕೋಪನಾ ಸಮಿತಿ ಚೆರ್ಕಳ ಟೌನ್ ಘಟಕದ ಅಧ್ಯಕ್ಷ ಬಿ.ಎಂ.ಶರೀಫ್ ಸ್ವಾಗತಿಸಿದರು.
ಚೆರ್ಕಳದಲ್ಲಿ ಪ್ರಸಕ್ತ ಪೇಟೆಯ ವ್ಯಾಪಾರಿ ಸಂಸ್ಥೆಗಳಿಗೆ ಸಮಾನಾಂತರವಾಗಿ ಸರ್ವೀಸ್ ರಸ್ತೆಗಳಿದ್ದು, ಇವುಗಳನ್ನು ಮಣ್ಣು ಹೊಂಡ ತೋಡಿ ತಳಭಾಗದಲ್ಲಿ ನಿರ್ಮಿಸುತ್ತಿರುವುದರಿಂದ ಪೇಟೆಯಲ್ಲಿ ಜನತೆಗೆ ವ್ಯಾಪಾರಿ ಸಂಸ್ಥೆಗಳಿಗೆ ತೆರಳಲು ಹಾಗೂ ಪ್ರಯಾಣಿಕರ ಸಂಚಾರಕ್ಕೆ ಸಮಸ್ಯೆ ಉಂಟಾಗಲಿರುವುದಾಗಿ ಪ್ರತಿಭಟನಾಕಾರರು ದೂರಿದ್ದಾರೆ.




