ಕಾಸರಗೋಡು: ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಒಳಗೊಂಡಿರುವ ಜಿಲ್ಲೆಯ ಎಂಟು ಆರೋಗ್ಯ ಕೇಂದ್ರಗಳಲ್ಲಿ ಆಧುನಿಕ ಸೌಲಭ್ಯಗಳಿರುವ ನೂತನ ಕಟ್ಟಡಗಳನ್ನು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಚೆಂಗಳ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಕಾಸರಗೋಡು ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯನ್ನು ಸ್ವಾವಲಂಬಿಯಾಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ ಅಧ್ಯಕ್ಷತೆ ವಹಿಸಿದ್ದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ ಸಮ್ಮೇಳನ ಸಭಾಂಗಣ ಉದ್ಘಾಟಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಫಿಯಾ ಹಾಶಿಂ, ಕಾಸರಗೋಡು ಜನರಲ್ ಆಸ್ಪತ್ರೆ ಪ್ರಭಾರಿ ಅಧೀಕ್ಷಕ ಡಾ.ಜಮಾಲ್ ಅಹಮದ್, ಸಿಎಚ್ ಸಿ ಮುಳಿಯಾರ್ ಬ್ಲಾಕ್ ವೈದ್ಯಾಧಿಕಾರಿ ಎ.ಎಸ್.ಶಮೀಮಾ ತನ್ವೀರ್ ಮೊದಲದವರು ಉಪಸ್ಥಿತರಿದ್ದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ ತುರುತ್ತಿ ಕೇಂದ್ರವನ್ನು 1.75 ಕೋಟಿ, ಉಡುಂಬುತ್ತಲ ಕೇಂದ್ರ 1.50 ಕೋಟಿ, ತೈಕಡಪ್ಪುರ 1.05 ಕೋಟಿ, ಅಜನೂರು 1.51 ಕೋಟಿ, ಎಣ್ಣಪಾರ 1.80 ಕೋಟಿ, ಚೆಂಗಳ 1.70 ಕೋಟಿ, ಅಂಗಡಿಮೊಗರು 85ಲಕ್ಷ, ವಾಣೀನಗರ 82.50ಲಕ್ಷದಂತೆ ಒಟ್ಟು 11ಕೋಟಿ ರೂ. ಮೊತ್ತವನ್ನು ಹೊಸ ಕಟ್ಟಡಗಳ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ.
ಉದ್ಘಾಟನೆಗೊಂಡ 8 ಆರೋಗ್ಯ ಕೇಂದ್ರಗಳ ಪೈಕಿ ತುರುತ್ತಿ, ಉಡುಂಬುತ್ತಲ, ತೈಕ್ಕಡಪ್ಪುರ, ಅಜನೂರು ಮತ್ತು ಎಣ್ಣಪ್ಪಾರ ತೇವ ಗುಣಮಟ್ಟದ ಕುಟುಂಬ ಆರೋಗ್ಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ವಾಣಿನಗರ, ಚೆಂಗಳ ಮತ್ತು ಅಂಗಡಿಮೊಗರು ಆರೋಗ್ಯ ಕೇಂದ್ರಗಳನ್ನು 'ಆದ್ರ್ರಂ' ಗುಣಮಟ್ಟದಲ್ಲಿ ಮೇಲ್ದರ್ಜೆಗೇರಿಸುವ ಕ್ರಮ ಪ್ರಗತಿಯಲ್ಲಿವೆ.





