ಕುಂಬಳೆ: ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ ಅಂಗವಾಗಿ ಶ್ರೀ ವಿಷ್ಣುಮೂರ್ತಿ ದೈವದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಭೇಟಿ ಸೋಮವಾರ ನಡೆಯಿತು. ಈ ಸಂದರ್ಭ ದೇವಸ್ಥಾನ ಆಡಳಿತ ಸಮಿತಿ, ಸಿಬ್ಬಂದಿ, ಯಜಮಾನರ ಮನೆಯವರು ಶ್ರೀದೈವವನ್ನು ಬರಮಾಡಿಕೊಂಡರು. ನಂತರ ಯಜಮಾನರ ಮನೆ ಭೇಟಿ ನಡೆಯಿತು.
ಬೆಳಗ್ಗೆ ಮುಚ್ಚಿಲೋಟ್ ಕ್ಷೇತ್ರದಲ್ಲಿ ಪುಲ್ಲೂರ್‍ಕಣ್ಣನ್ ದೈವದ ನರ್ತನವಾಗಿ ಮಾಯಿಪ್ಪಾಡಿ ಅರಮನೆಗೆ ಭೇಟಿ ನೀಡುವ ಕಾರ್ಯಕ್ರಮ ನಡೆಯಿತು. ನಂತರ ಕಣ್ಣಂಗಾಟ್ ಭಗವತೀ ದೈವದ ನರ್ತನ, ಪುಲ್ಲೂರ್‍ಕಾಳಿ ದೈವದ ನರ್ತನ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ವೇಟಕ್ಕೊರುಮಗನ್ ದೈವದ ನರ್ತನ, ಪುಲ್ಲೂರ್‍ಕಣ್ಣನ್ ದೈವದ ವೆಳ್ಳಾಟ, 6ಕ್ಕೆ ತಂಬುರಾಟಿಯ ಸಂಧ್ಯಾ ಸ್ತೋತ್ರ, ಮೂವಾಳಂಕುಯಿ ಚಾಮುಂಡಿ ದೈವದ ತೊಡಙಲ್ ನಡೆಯಿತು.
ಇಂದಿನ ಕಾರ್ಯಕ್ರಮ:
ಮಾ.5ರಂದು ಬೆಳಗ್ಗೆ 9.30ಕ್ಕೆ ಪುಳ್ಳೂರ್‍ಕಣ್ಣನ್ ದೈವದ ನರ್ತನ, 10.30ಕ್ಕೆ ಕಣ್ಣಂಗಾಟ್ ಭಗವತೀ ದೈವದ ನರ್ತನ, 11.30ಕ್ಕೆ ಪುಲ್ಲೂರ್‍ಕಾಳಿ ಭಗವತೀ ದೈವದ ನರ್ತನ, ಮಧ್ಯಾಹ್ನ 12.30ಕ್ಕೆ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, 2ರಿಂದ ವಿಷ್ಣುಮೂರ್ತಿ ದೈವದ ನರ್ತನ, 4.30ರಿಂದ ಪುಲ್ಲೂರ್‍ಕಣ್ಣನ್ ದಐವದ ವೆಳ್ಳಾಟ, ಸಂಜೆ 5.30ರಿಂದ ಮೂವಾಳಂಕುಯಿ ಚಾಮುಂಡಿ ದೈವ ನರ್ತನ, 6ರಿಂದ ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ 9ರಿಂದ ಕಣ್ಣಂಗಾಟ್ ಭಗವತೀ ಮತ್ತು ಪುಲ್ಲೂರ್‍ಕಾಳಿ ಭಗವತೀ ದೈವದ ಸ್ತೋತ್ರ ನಡೆಯುವುದು.





