ಕಾಸರಗೋಡು: ಮತದಾರರ ಪಟ್ಟಿಯಲ್ಲಿನ ಲೋಪ ತಿದ್ದುಪಡಿಗಾಗಿ ಮಂಜೇಶ್ವರಂ ಕ್ಷೇತ್ರದ 205 ಮತಗಟ್ಟೆಗಳಲ್ಲಿ ಗ್ರಾಮ ಸಭೆಗಳು ನಡೆದಿದ್ದು, ಹೊಸದಾಗಿ ಮತದಾರರ ಸೇರ್ಪಡೆಗಾಗಿ 108 ಅರ್ಜಿಗಳು ಲಭಿಸಿದ್ದು, ಹೊರತುಪಡಿಸುವಿಕೆಗೆ 54, ಹಾಗೂ ತಿದ್ದುಪಡಿಗಾಗಿ 91 ಅರ್ಜಿಗಳು ಲಭಿಸಿದೆ.
ಕಾಸರಗೋಡು ಕ್ಷೇತ್ರದ 190 ಮತಗಟ್ಟೆಗಳಲ್ಲಿ ನಡೆದ ಗ್ರಾಮ ಸಭೆಗಳಲ್ಲಿ ಸೇರ್ಪಡೆಗಾಗಿ 111 ಅರ್ಜಿಗಳು, ಹೊರತುಪಡಿಸಲು 78 ಅರ್ಜಿಗಳು ಮತ್ತು ತಿದ್ದುಪಡಿಗಾಗಿ 59 ಅರ್ಜಿಗಳು ಲಭಿಸಿದೆ. ಉದುಮ ಕ್ಷೇತ್ರದ 198 ಮತಗಟ್ಟೆಗಳಲ್ಲಿ ಗ್ರಾಮ ಸಭೆಗಳು ನಡೆಸಲಾಗಿದ್ದು, ಸೇರ್ಪಡೆಗಾಗಿ 129 ಅರ್ಜಿಗಳು, ಹೊರತುಪಡಿಸಲು 66 ಅರ್ಜಿಗಳು ಮತ್ತು ತಿದ್ದುಪಡಿಗಾಗಿ 80 ಅರ್ಜಿಗಳು ಲಭಿಸಿದೆ.
ಕಾಞಂಗಾಡು ಕ್ಷೇತ್ರದ 196 ಮತಗಟ್ಟೆಗಳಲ್ಲಿ ಗ್ರಾಮ ಸಭೆಗಳು ನಡೆದಿದ್ದು, ಸೇರ್ಪಡೆಗಾಗಿ 214ಅರ್ಜಿಗಳನ್ನು ಹೊರತುಪಡಿಸಲು 83 ಅರ್ಜಿಗಳು ಮತ್ತು ತಿದ್ದುಪಡಿಗಾಗಿ 84 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ತ್ರಿಕರಿಪುರ ಕ್ಷೇತ್ರದ 194 ಮತಗಟ್ಟೆಗಳಲ್ಲಿ ಗ್ರಾಮ ಸಭೆಗಳು ನಡೆದಿವೆ. ಸೇರ್ಪಡೆಗಾಗಿ 138 ಅರ್ಜಿಗಳು, ಹೊರತುಪಡಿಸಲು 157 ಅರ್ಜಿಗಳು ಮತ್ತು ತಿದ್ದುಪಡಿಗಾಗಿ 51 ಅರ್ಜಿಗಳು ಬಂದಿವೆ.
ಮಂಜೇಶ್ವರಂ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 388 ಮಂದಿ, ಕಾಸರಗೋಡು ಕ್ಷೇತ್ರದಲ್ಲಿ 567, ಉದುಮ ಕ್ಷೇತ್ರದಲ್ಲಿ 382, ಕಾಞಂಗಾಡ್ ಕ್ಷೇತ್ರದಲ್ಲಿ 56 ಹಾಗೂ ತ್ರಿಕರಿಪುರ ಕ್ಷೇತ್ರದಲ್ಲಿ 123 ಮಂದಿ ಮೃತಪಟ್ಟಿರುವುದಾಗಿ ಗುರುತಿಸಲಾಗಿದೆ. ಅವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಕ್ರಮ ಕೈಗೊಳ್ಳಲಾಗಿದೆ.





