ಬದಿಯಡ್ಕ: ಎನ್‍ಡಿಎ ಕಾಸರಗೋಡು ಮಂಡಲ ಚುನಾವಣಾ ಕಛೇರಿಯ ಉದ್ಘಾಟನಾ ಸಮಾರಂಭ ಬುಧವಾರ ಬದಿಯಡ್ಕದಲ್ಲಿ ಜರಗಿತು. ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ದೀಪಬೆಳಗಿಸಿ ಉದ್ಘಾಟಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಯುವ ಪ್ರತಿಭಾನ್ವಿತೆಗೆ ಕಾಸರಗೋಡು ಲೋಕಸಭೆಯಲ್ಲಿ ಸ್ಪರ್ಧಿಸಲು ಮೋದಿ ಸರ್ಕಾರವು ಅವಕಾಶವನ್ನು ನೀಡಿದೆ. ಅನೇಕ ಯೋಜನೆಗಳ ಮೂಲಕ ಜನಸಾಮಾನ್ಯರತ್ತ ತಲುಪಿದ ಮೋದಿ ಸರ್ಕಾರವು ಮತ್ತೊಮ್ಮೆ ಅಕಾರಕ್ಕೆ ಬಂದೇ ಬರುತ್ತದೆ. ಕಳೆದ ಬಾರಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಐಕ್ಯರಂಗದ ಅಭ್ಯರ್ಥಿ ಸಂಪೂರ್ಣ ವಿಫಲವಾಗಿದ್ದಾರೆ. ಮೋದಿ ಸರ್ಕಾರದ ಸಾಧನೆಯ ಮೂಲಕ ಕಾಸರಗೋಡಿನಲ್ಲಿಯೂ ಬಿಜೆಪಿ ವಿಜಯಿಯಾಗಬೇಕು ಎಂದು ಕಾರ್ಯಕರ್ತರು ಪಣತೊಟ್ಟಾಗ ಗೆಲುವು ನಮ್ಮದಾಗಲಿದೆ ಎಂದರು.
ವಲಯ ಪ್ರಧಾನ ಕಾರ್ಯದರ್ಶಿ ಪಿ ಸುರೇಶ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್ ತಂತ್ರಿ ಕುಂಟಾರು, ರಾಷ್ಟ್ರೀಯ ಸಮಿತಿ ಸದಸ್ಯ ಸಂಜೀವ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಸುಧಾಮ ಗೋಸಾಡ, ಜಿಲ್ಲಾ ಕಾರ್ಯದರ್ಶಿ ಸೌಮ್ಯ ಮಹೇಶ್, ಶಿವಕೃಷ್ಣ ಭಟ್, ಶೈಲಜಾ ಭಟ್, ಹರೀಶ್ ಪುತ್ರಕಳ, ಗೋಪಾಲಕೃಷ್ಣನ್, ಪಿ.ಆರ್ ಸುನಿಲ್, ಗುರುಪ್ರಸಾದ್, ಸುಕುಮಾರನ್, ಚಂದು ಮಾಸ್ತರ್, ಈಶ್ವರ ಮಾಸ್ತರ್, ಮುಂತಾದವರು ಭಾಗವಹಿಸಿದರು, ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಸ್ವಾಗತಿಸಿ, ಕಾಸರಗೋಡು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಮೀಳಾ ಮಜಲ್ ವಂದಿಸಿದರು.

