HEALTH TIPS

ಇಕ್ಕೇರಿಯಲ್ಲಿ ರಂಗಸಿರಿ ತಂಡದ ಯಕ್ಷಗಾನ ಬಯಲಾಟ

               ಬದಿಯಡ್ಕ: ಬದಿಯಡ್ಕ ಇಕ್ಕೇರಿ ಶ್ರೀ ಶಂಕರನಾರಾಯಣ ದೇವರ ವಾರ್ಷಿಕ ಉತ್ಸವದ ಸಂದರ್ಭ ರಂಗಸಿರಿ ಸಾಂಸ್ಕøತಿಕ ವೇದಿಕೆ ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು. ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ಸುದರ್ಶನ ವಿಜಯ ಹಾಗೂ ತರಣಿಸೇನ ಕಾಳಗ ಪ್ರಸಂಗಗಳ ಪ್ರದರ್ಶನ ನಡೆಯಿತು. ಸುದರ್ಶನ ವಿಜಯ ಪ್ರಸಂಗದಲ್ಲಿ ದೇವೇಂದ್ರನಾಗಿ ಶಶಿಧರ ಕುದಿಂಗಿಲ, ದೇವೇಂದ್ರ ಬಲಗಳಾಗಿ ಶ್ರೇಯಾ ಹಾಗೂ ಸುಕೃತಾ, ಶತ್ರುಪ್ರಸೂದನನಾಗಿ ಶರತ್, ರಾಕ್ಷಸ ಬಲಗಳಾಗಿ ಮೋಕ್ಷಾ ಹಾಗೂ ವಿಷ್ಣು, ಈಶ್ವರನಾಗಿ ಶ್ರಾವ್ಯಾ, ವಿಷ್ಣುವಾಗಿ ಮೇಘನಾ ಕುಡಾಣ, ಲಕ್ಷ್ಮಿಯಾಗಿ ಶರಣ್ಯಾ, ಸುದರ್ಶನನಾಗಿ ಅಭಿಜ್ಞಾ ಭಟ್ ಬೊಳುಂಬು ಪಾತ್ರಗಳಿಗೆ ಜೀವ ತುಂಬಿದರು.

            ತರಣಿಸೇನ ಕಾಳಗದಲ್ಲಿ ತರಣಿಸೇನನಾಗಿ ವಿದ್ಯಾ ಆನಂದ್ ಕೆಕ್ಕಾರು, ಶ್ರೀರಾಮನಾಗಿ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ, ವಿಭೀಷಣನಾಗಿ ಶಶಿಧರ ಕುದಿಂಗಿಲ ಹಾಗೂ ಸರಮೆಯಾಗಿ ಸುಧಾ ಪಾತ್ರಗಳಲ್ಲಿ ಪ್ರಬುದ್ಧತೆ ಮೆರೆದರು. ಭಾಗವತರಾಗಿ ದಯಾನಂದ ಕೋಡಿಕ್ಕಲ್, ಚೆಂಡೆ ಮದ್ದಳೆಗಳಲ್ಲಿ ಸುದರ್ಶನ ಕಲ್ಲೂರಾಯ, ಕೃಷ್ಣಮೂರ್ತಿ ಎಡನಾಡು ಹಾಗೂ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಹಿಮ್ಮೇಳ ಸಾಥಿ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries