ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ಗುರುವಾರ ಧ್ವಜಾರೋಹಣ ನಡೆಯಿತು. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
21ರಂದು ಬೆಳಗ್ಗೆ 7.30ಕ್ಕೆ ಉಷ:ಪೂಜೆ, ಗಣಪತಿ ಹೋಮ, ನಡೆಯಲ್ಲಿ ಶ್ರೀದೇವರ ಪ್ರಾರ್ಥನೆ, ಶ್ರೀದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ, ನವಕಾಭಿಷೇಕ, ತುಲಾಭಾರ ಸೇವೆ ನಡೆಯಿತು. ಈ ಸಂದರ್ಭ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಸಬ್ಬಣಕೋಡಿ ರಆಮಭಟ್ ನಿರ್ದೇಶನದಲ್ಲಿ ಯಕ್ಷನೃತ್ಯ ಕಾರ್ಯಕ್ರಮ ಜರುಗಿತು.
22ರಂದು ಬೆಳಗ್ಗೆ 10ಕ್ಕೆ ಶ್ರೀದೆವರ ದರ್ಶನ ಬಲಿ, ರಾತ್ರಿ 8ಕ್ಕೆ ಶ್ರೀಭೂತಬಲಿ, ಕಟ್ಟೆಪೂಜೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಧಾಮ ಮಾಣಿಲ ಯಕ್ಷಗಾನ ಮಂಡಳಿಯಿಂದ 'ಸುದರ್ಶನ ವಿಜಯ' ಯಕ್ಷಗಾನ ಬಯಲಾಟ ನಡೆಯುವುದು. ಈ ಸಂದರ್ಭ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಪ್ರಸಕ್ತ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮಾರ್ಚ್ ತಿಂಗಳಲ್ಲಿ ನಿವೃತ್ತರಾಗಲಿರುವ ರಾಜೇಂದ್ರ ಬಿ. ಅವರನ್ನು ಗೌರವಿಸಲಾಗುವುದು.



