HEALTH TIPS

ಪೆರ್ಲ ನಾಲಂದ ಕಾಲೇಜಿನಲ್ಲಿ ವಿಶ್ವ ವನ್ಯಜೀವಿ ದಿನಾಚರಣೆ

                  ಪೆರ್ಲ: ನಾಲಂದ ಕಾಲೇಜಿನಲ್ಲಿ ಭೂಮಿತ್ರಸೇನಾ ಕ್ಲಬ್ ಹಾಗೂ ಎನ್ನೆಸ್ಸೆಸ್ ಘಟಕ ಸಂಖ್ಯೆ 49 ಜಂಟಿ ಆಶ್ರಯದಲ್ಲಿ ಮಂಗಳವಾರ ವಿಶ್ವ ವನ್ಯಜೀವಿ ದಿನ ಆಚರಿಸಲಾಯಿತು. 

                ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥೆ ಸಾಜಿದ ಸಿ.ಎಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಮಾನವನ ಅತ್ಯಾಕಾಂಕ್ಷೆಯಿಂದ ಅರಣ್ಯ ನಶಿಸುತ್ತಿದೆ. ಇದರಿಂದ ಜನ ವಸತಿ ಪ್ರದೇಶಗಳಿಗೆ ಲಗ್ಗೆಯಿಡುವ ಕಾಡು ಪ್ರಾಣಿಗಳ ದಾಳಿ ಹೆಚ್ಚುತ್ತಿದೆ. ಅರಣ್ಯ ನಾಶ ಪ್ರಾಣಿ ಪಕ್ಷಿಗಳ ನಾಶಕ್ಕೆ ಕಾರಣವಾಗುತ್ತಿದೆ. ಪ್ರಕೃತಿಯ ಸಮತೋಲನಕ್ಕೆ ಸಣ್ಣ ಜೀವಿಗಳು ಸಹಿತ ಎಲ್ಲಾ ಜೀವಿಗಳಿಗೂ ಪ್ರಾಮುಖ್ಯತೆ ಇದೆ. ಇವನ್ನೆಲ್ಲಾ ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದರು. 

          ಎನ್ನೆಸ್ಸೆಸ್ ಯೋಜನಾಧಿಕಾರಿ ಕಾವ್ಯಚಂದ್ರನ್ ಮತ್ತು ಭೂಮಿತ್ರಸೇನಾ ಕ್ಲಬ್ ಸಂಯೋಜಕ ಮನೋಜ್ ಕುಮಾರ್ ಪಿ. ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಸ್ವಯಂ ಸೇವಕ ಗಣೇಶಕೃಷ್ಣ ಸ್ವಾಗತಿಸಿ, ಕಾರ್ಯದರ್ಶಿ ಹರ್ಷಿತಾ ವಂದಿಸಿದರು. ಸರಣ್ಯ ಸಿ.ಎಚ್.ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries