ಕಾಸರಗೋಡು: ಪರವನಡ್ಕ ಸರ್ಕಾರಿ ವೃದ್ಧ ಸದನದಲ್ಲಿ 2024 ರ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಸ್ವೀಪ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃದ್ದಾಶ್ರಮ ವಾಸಿಗಳು ಚಲಾಯಿಸಿದ್ದ ತಮ್ಮ ಮತದಾನದ ಅನುಭವಗಳನ್ನು ಹಂಚಿಕೊಂಡರು. ತಮ್ಮ ಹಳೆಯ ಮತದಾನದ ಅನುಭವ ಹಾಗೂ ಮತದಾನದ ವೈಭವವನ್ನು ಹಂಚಿಕೊಂಡರು.
ಉಪಸ್ಥಿತರಿದ್ದ ಎಲ್ಲ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಕೋರಿದರು. ಲೇಖಕಿ ಕುಟ್ಟಿಯಮ್ಮ ಅವರು ಕವನ ಮಂಡಿಸಿ ಮತದಾನದ ಅನುಭವ ಹಂಚಿಕೊಂಡರು. ಸ್ವೀಪ್ ನೋಡಲ್ ಅಧಿಕಾರಿ ಟಿ.ಟಿ.ಸುರೇಂದ್ರನ್, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ವೃದ್ಧಸದನ ಅಧೀಕ್ಷಕ ನಿಶಾಂತ್ ಕುಮಾರ್ ಮತ್ತು ಕೋರ್ ಕಮಿಟಿ ಸದಸ್ಯರಾದ ಎಂ. ಶೀಬಾ ಮತ್ತು ಕೆ.ವಿ.ಲಿಜಿನ್ ಮಾತನಾಡಿದರು. 70 ರಿಂದ 87 ವರ್ಷ ವಯಸ್ಸಿನ ಸುಮಾರು 40 ವೃದ್ದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



