ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಶಿಕ್ಷಣ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಹಾಗು ಸುತ್ತೋಲೆ – ಉರಿಸುವ ಮೂಲಕ ಕೆ.ಪಿ.ಎಸ್.ಟಿ.ಎಯಿಂದ ಗುರುವಾರ ಪ್ರತಿಭಟನೆ ನಡೆಯಿತು. ಕೆ.ಪಿ.ಎಸ್.ಟಿ.ಎ ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಮೀಯಪದವು ಅಧ್ಯಕ್ಷತೆ ವಹಿಸಿದ್ದರು.
ಕಳೆದ 39 ತಿಂಗಳಿನಿಂದ ಅಧ್ಯಾಪಕರು ಹಾಗು ಸರ್ಕಾರಿ ಸೇವೆಯಲ್ಲಿ ನಿರತರಾದವರಿಗೆ ಕ್ಷೇಮಭತ್ತೆ ನೀಡದೆ ಜನದ್ರೋಹ ನಡೆಸುತ್ತಿರುವ ಸರ್ಕಾರಕ್ಕೆ ಎದುರಾಗಿ ಧರಣಿ ಸತ್ಯಾಗ್ರಹ ಹಾಗು ಸುತ್ತೋಲೆಯನ್ನು ಉರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಪಿ.ಎಸ್.ಟಿ.ಎ ರೆವೆನ್ಯೂ ಜಿಲ್ಲಾ ಸೆಕ್ರೆಟರಿ ಪಿ.ಟಿ ಬೆನ್ನಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಜೊತೆಕಾರ್ಯದರ್ಶಿ ಜನಾರ್ಧನನ್ ಕೆ.ವಿ ಜಿಲ್ಲಾ ಅಧ್ಯಕ್ಷÀ ವಿಮಲ್ ಅಡಿಯೋಡಿ ಉಪಜಿಲ್ಲಾ ಜೊತೆ ಕಾರ್ಯದರ್ಶಿ ಅಖಿಲಾ ಟಿ.ಎನ್ ಮುಖ್ಯೋಪಾಧ್ಯಾಯ ಪ್ರಕಾಶನ್ ನಂಬೂದಿರಿ ಶುಭಾಶಂಸನೆಗೈದರು. ಕೆ.ಪಿ.ಎಸ್.ಟಿ.ಎ ಮಂಜೇಶ್ವರ ಉಪಜಿಲ್ಲಾ ಕಾರ್ಯದರ್ಶಿ ಒ.ಯಂ ರಶೀದ್ ಸ್ವಾಗತಿಸಿ, ಕೋಶಾಧಿಕಾರಿ ಪ್ರಸೀದಾ ಕುಮಾರಿ ಕೆ.ವಿ ವಂದಿಸಿದರು.

.jpg)
