HEALTH TIPS

ಆಸ್ತಿ ಅಂತಸ್ತು ಸಮಾಜದ ಬೆಳವಣಿಗೆಗೂ ಪೂರಕವಾಗಿರಲಿ:ಸಿ.ಎ.ಸುಧೀರ್ ಕುಮಾರ್ ಶೆಟ್ಟಿ

                ಪೆರ್ಲ: ಶಿಕ್ಷಣದಿಂದ ಮಾತ್ರ ಭವಿಷ್ಯ ರೂಪಿಸಲಾಗದು. ಶಿಕ್ಷಣದ ಜೊತೆಗಿನ ಇತರ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುವುದು. ಅವರವರ ಕೌಶಲ, ಸಾಮಥ್ರ್ಯಗಳು ಜೀವನದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಹೇತುವಾಗುವುದು ಎಂದು ನಾಲಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.

          ಪೆರ್ಲ ನಾಲಂದ ಕಾಲೇಜಿನಲ್ಲಿ ಶುಕ್ರವಾರ ನಡೆದ "ಅವಿನ್ಯ 2ಕೆ 24" ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

            ಒಬ್ಬರ ಭವಿಷ್ಯವನ್ನು ಇನ್ನೊಬ್ಬರು ನಿರ್ಧರಿಸಲು ಸಾಧ್ಯವಿಲ್ಲ. ಆದರೆ ಪ್ರೇರಣೆಯಾಗಬಹುದು.ಅವರವರ ಭವಿಷ್ಯವನ್ನು ಅವರವರೇ ನಿರ್ಮಿಸಬೇಕು. ಕೇವಲ ಹಣಗಳಿಕೆಯೊಂದೆ ಜೀವನದ ಉದ್ದೇಶವಾಗಿರಬಾರದು. ನಮ್ಮ ಆಸ್ತಿ ಅಂತಸ್ತು ನಮ್ಮ ವೈಯುಕ್ತಿಕ ಹಾಗೂ ಸಮಾಜದ ಬೆಳವಣಿಗೆಗೂ ಪೂರಕವಾಗಿರಬೇಕು. ಸೋಲು ಮತ್ತು ಗೆಲುವು ನಮ್ಮ ಜೀವನದ ಬಾಗವಾಗಿದ್ದು ಇವೆರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ನಮಗಿರಬೇಕು ಎಂದರು.

          ಸಿನೆಮಾ ರಂಗದ ಮೋಹನ್ ಪಡ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೂ ಲ್ ಅವರದ್ದೇ ಆದ ಕೌಶಲ್ಯ ಹಾಗೂ ಸಾಮಥ್ರ್ಯವಿದೆ. ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಕಾಲೇಜಿನ ವೇದಿಕೆಗಳು ಪ್ರಧಾನ ಪಾತ್ರ ವಹಿಸುವುದು ಎಂದರು.

         ಎಣ್ಮಕಜೆ ಗ್ರಾಪಂ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಕೇಶವ ಶರ್ಮ ಮಾತನಾಡಿದರು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎಂಡೋವ್ ಮೆಂಟ್  ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಬಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

       ಪ್ರಾಂಶುಪಾಲ ಶಂಕರ ಖಂಡಿಗೆ ಸ್ವಾಗತಿಸಿ, ಸಹ ಪ್ರಾಧ್ಯಾಪಕ ಶ್ರೀನಿಧಿ ಕೆ.ವಂದಿಸಿದರು. ಪ್ರಾಧ್ಯಾಪಕಿ ಕಾವ್ಯ ಚಂದ್ರನ್ ನಿರೂಪಿಸಿದರು. ಎಬಿಸಿಡಿ ಮ್ಯೂಸಿಕಲ್ಸ್  ಕಾಸರಗೋಡು ತಂಡದ ಮನರಂಜನಾ ಕಾರ್ಯಕ್ರಮಗಳು ನಡೆದವು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries