ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅನುದಾನ ಬಳಸಿ ನಡೆಸುವ ಅಭಿವೃದ್ಧಿ ಯೋಜನೆ ಮತ್ತು ವಿಶೇಷ ಅಭಿವೃದ್ಧಿ ನಿಧಿಯಡಿಯಲ್ಲಿ ನಾಲ್ಕು ಗ್ರಾಮೀಣ ರಸ್ತೆಗಳ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದ್ದಾರೆ.
ಹುಬ್ಬಳ್ಳಿ ರಸ್ತೆ 10 ಲಕ್ಷ (ಮಂಗಲ್ಪಾಡಿ ಗ್ರಾಮ ಪಂಚಾಯಿತಿ), ಅಂಬಿತ್ತಾಡಿ ರಸ್ತೆ 10 ಲಕ್ಷರೂ.(ಮಂಜೇಶ್ವರಂ ಗ್ರಾಮ ಪಂಚಾಯಿತಿ), ಕಾಯರ್‍ಕಟ್ಟೆ ಮಾಳೇವ್ ರಸ್ತೆ ರೂ.5 ಲಕ್ಷ (ಪೈವಳಿಗೆ ಗ್ರಾಮ ಪಂಚಾಯಿತಿ) ಮತ್ತು ಸೇರಾಜೆ ರಕ್ತೇಶ್ವರಿ ದೇವಸ್ಥಾನ ರಸ್ತೆ ರೂ.5 ಲಕ್ಷ (ಎಣ್ಮಕಜೆ ಗ್ರಾಮ ಪಂಚಾಯಿತಿ) ಮಂಜೂರುಮಾಡಲಾಗಿದೆ.

