ಬದಿಯಡ್ಕ: ಕುಂಬ್ಡಾಜೆ ಪೊಡಿಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಟ್ರಸ್ಟ್ ಹಾಗೂ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಮತ್ತು ಅರ್ಬುದ ರೋಗದ ಬಗ್ಗೆ ಮಾಹಿತಿ ಮಾ 24ರಂದು ಬೆಳಗ್ಗೆ 9.30ಕ್ಕೆ ಚೀರುಂಬಾ ಭಗವತೀ ಸಭಾ ಭವನದಲ್ಲಿ ಜರುಗಲಿದೆ. ದುಬೈಯಲ್ಲಿ ಹಿರಿಯ ಉದ್ಯಮಿಯಾಗಿರುವ ಶಿವಶಂಕರ್ ನೆಕ್ರಾಜೆ ಸಮಾರಂಭ ಉದ್ಘಾಟಿಸುವರು. ಕ್ಷೇತ್ರ ಆಚಾರ ಸ್ಥಾನಿಕ ಅಂಬಾಡಿ ಕಾರ್ನವರ್ ಗೌರವ ಉಪಸ್ಥಿತರಿರುವರು. ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯೋಜನಾಧಿಕಾರಿ ದಿನೇಶ್ ಕೆ. ಕೊಕ್ಕಡ, ಕುಂಬ್ಡಾಜೆ ಗ್ರಪಂ ಸ್ಥಾಯೀ ಸಮಿತಿ ಅಧ್ಯಕ್ಷೆ ಖದೀಜಾ, ಡಾ> ಶ್ರೀನಿಧಿ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡ್, ಗಂಗಾಧರ ಪಳ್ಳತ್ತಡ್ಕ ಉಪಸ್ಥಿತರಿರುವರು.
ಕಣ್ಣು ಸಂಬಂಧಿ ಕಾಯಿಲೆ, ಕ್ಯಾನ್ಸರ್, ಉದರ ರೋಗ ಅಲ್ಲದೆ, ಎಲುಬು, ಇಎನ್‍ಟಿ, ಜನರಲ್‍ಮೆಡಿಸಿನ್ ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ರೋಗಿಗಳ ತಪಾಸಣೆ ನಡೆಸುವರು ಎಂದು ಪ್ರಕಟಣೆ ತಿಳಿಸಿದೆ.




