HEALTH TIPS

ಗೋಳಿತ್ತಾರು ಮಂದಿರ ಪ್ರತಿಷ್ಠಾ ಮಹೋತ್ಸವ- ಧಾರ್ಮಿಕ ಸಭೆ

              ಪೆರ್ಲ: ಗೋಳಿತ್ತಾರು ಶ್ರೀಸಿದ್ಧಿ ವಿನಾಯಕ ಭಜನಾ ಮಂದಿರದ 14ನೇ ವಾರ್ಷಿಕೋತ್ಸವ ಮತ್ತು ದೇವರ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠಾಪನೆಯ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು. ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂದಿರದ ತಂತ್ರಿವರ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಧಾರ್ಮಿಕ ಉಪನ್ಯಾಸಗೈದರು.


           ವೇದಮೂರ್ತಿ ಚಂದ್ರಶೇಖರ ಭಟ್ ಮೊಗೇರು,ಎಣ್ಮಕಜೆ ತರವಾಡಿನ ಸುಧೀರ್ ಕುಮಾರ್ ಶೆಟ್ಟಿ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ, ಜನಾರ್ಧನ ರೈ,ಸಂಜೀವ ಪೂಜಾರಿ ಸಂಟನಡ್ಕ ಮಾತನಾಡಿದರು. ಉದಯ ಚೆಟ್ಟಿಯಾರ್ ಬಜಕೂಡ್ಲು, ರಾಧಾಕೃಷ್ಣ ಆಳ್ವ ಪೂವನಡ್ಕ, ಬಾಲಕೃಷ್ಣ ಶೆಟ್ಟಿ ಕಾಟುಕುಕ್ಕೆ, ಮಹಾಲಿಂಗೇಶ್ವರ ಭಟ್,ಪೂವನಡ್ಕ ತರವಾಡಿನ ಕೋಟ್ಯನ್ ರೈ, ಸೇರಾಜೆ ತರವಾಡಿನ ರತ್ನಾಕರ ರೈ,  ವಿಶ್ವನಾಥ ಪೂಜಾರಿ ಬಂಟುಕೊಟ್ಯ, ಸುರೇಶ್ ಕೆದ್ರೋಳಿ,ಡಾ. ನಾರಾಯಣ ನಾಯ್ಕ ಕೆದ್ರೋಳಿ,ಬಾಬು ಪೂಜಾರಿ ಕಾನ,  ಶ್ರೀಸಿದ್ಧಿವಿನಾಯಕ ಭಜನಾ ಸಮಿತಿಯ ಗೌರವಾಧ್ಯಕ್ಷ ಶ್ರೀರಾಮ್ ಭಟ್ ಗುಂಡಿತ್ತಾರು, ಬಾಳೆಕಲ್ಲು ಗರಡಿ ಮನೆಯ ಲಕ್ಷ್ಮಿನಾರಾಯಣ ಬಾಳೆಕಲ್ಲು ಮೊದಲಾದವರು ಉಪಸ್ಥಿತರಿದ್ದು. ಈ ಸಂದರ್ಭದಲ್ಲಿ ಬೆಳ್ಳಿಯ ಛಾಯಾಚಿತ್ರ ನಿರ್ಮಾಣದ ರೂವಾರಿಯಾದ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಂತ ಜೆ.ರೈ ಸ್ವಾಗತಿಸಿ ಜಯಂತ ಸೇರಾಜೆ ವಂದಿಸಿದರು. ರವಿ ಎಸ್.ಎಂ. ನಿರೂಪಿಸಿದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries