HEALTH TIPS

ಮುಳಿಂಜ ಶಾಲೆಯಲ್ಲಿ ವಿದಾಯ ಕೂಟ

           ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಜೇಶ್ವರ ಉಪಜಿ ಲ್ಲೆಯ ಮುಖ್ಯ ಶಿಕ್ಷಕರ ಸಮಿತಿ ವತಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕರನ್ನು ಬೀಳ್ಕೊಡಲಾಯಿತು. 

           ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಕೃಷ್ಣಮೂರ್ತಿ ಯಂ.ಯಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಬಿ.ಆರ್.ಸಿಯ ಬಿ.ಪಿ.ಸಿಜೋಯ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದು  ನಿವೃತ್ತರಿಗೆ ಶುಭ ಹಾರೈಸಿದರು. ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉಪಸ್ಥಿತರಿದ್ದರು. ಮುಳಿಗದ್ದೆ ಹೆದ್ದಾರಿ ಎ.ಯು.ಪಿ ಶಾಲೆಯ ಮುಖ್ಯ ಶಿಕ್ಷಕ ಆದಿನಾರಾಯಣ, ಎ.ಎಲ್.ಪಿ ಶಾಲೆ ಕಂದಲ್‍ನ ಮುಖ್ಯ ಶಿಕ್ಷಕ ಉಣ್ಣಿಕೃಷ್ಣನ್ ಶುಭ ಹಾರೈಸಿದರು. ಈ ವರ್ಷ ನಿವೃತ್ತರಾಗುತ್ತಿರುವ ಮಂಜೇಶ್ವರ ಉಪಜಿಲ್ಲೆಯ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಯಂ.ಯಸ್, ಎಸ್.ಪಿ.ಎ.ಎಲ್.ಪಿ ಶಾಲೆ ಬಾಯಾರಿನ ಮುಖ್ಯ ಶಿಕ್ಷಕ ವೆಂಕಪ್ಪ ಶೆಟ್ಟಿ, ಎ.ಜೆ.ಐ.ಎ.ಯು.ಪಿ ಶಾಲೆ ಉಪ್ಪಳದ ಮುಖ್ಯ ಶಿಕ್ಷಕ ಅನಿಲ್ ಕುಮಾರ್ ಸಿ.ಸಿ,  ಜಿ.ಎಲ್.ಪಿ.ಶಾಲೆ ಬಡಾಜೆಯ ಮುಖ್ಯ ಶಿಕ್ಷಕಿ ಪದ್ಮಾವತಿ, ಎ.ಯು.ಪಿ ಶಾಲೆ ಕುರುಡಪದವಿನ ಮುಖ್ಯ ಶಿಕ್ಷಕಿ ವಸಂತಕುಮಾರಿ, ಜಿ.ಬಿ.ಎಲ್.ಪಿ ಶಾಲೆ ಮಂಗಲ್ಪಾಡಿಯ ಮುಖ್ಯ ಶಿಕ್ಷಕಿ ಶಾಲಿನಿ ಬಿ.ಐಲ, ಎಸ್.ವಿ.ವಿ.ಯು.ಪಿ ಶಾಲೆ ಕೊಡ್ಲಮೊಗರಿನ ಮುಖ್ಯ ಶಿಕ್ಷಕಿ ಸರಳಕುಮಾರಿ ಮೊದಲಾದವರನ್ನು ಶಾಲು ಹೊದಿಸಿ ಪೇಟ, ಫಲಪುಷ್ಟ ನೀಡಿ ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಮಂಜೇಶ್ವರದ ಮುಖ್ಯ ಶಿಕ್ಷಕ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಭಟ್ ಸ್ವಾಗತಿಸಿ, ಸತ್ಯಪ್ರಕಾಶ ಇ.ಕೆ.ವಂದಿಸಿದರು. ಕಳಿಯೂರು ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಎ ಕಾರ್ಯಕ್ರಮವನ್ನು ನಿರ್ವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries