ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಕಾಡಿ ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಡಿ 1.10 ಕೋಟಿ ರೂ., ಶಾಸಕರ ನಿಧಿಯಿಂದ 50 ಲಕ್ಷ ರೂ., ಪಂಚಾಯತಿ ನಿಧಿಯಿಂದ 5 ಲಕ್ಷ ರೂ.ಗಳನ್ನು ವೆಚ್ಚ ಮಾಡಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.
ಮಂಜೇಶ್ವರಂ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಸಮ್ಮೇಳನ ಸಭಾಂಗಣವನ್ನು ಉದ್ಘಾಟಿಸಿದರು.
ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್. ಭಾರತಿ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ, ವರ್ಕಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ವಿ.ಸಾಮಾನಿ, ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಮಮತಾ ಶೆಟ್ಟಿ, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ,ಬ್ಲಾ.ಪಂ.ಸದಸ್ಯ ಮೊಯ್ದೀನ್ ಕುಂಞÂ್ಞ ತಲೇಕಳ,ಗ್ರಾ.ಪಂ.ಸದಸ್ಯರುಗಳಾದ ಇಬ್ರಾಹಿಂ ಧರ್ಮನಗರ, ಖಮರುನ್ನೀಸಾ ಮುಸ್ತಫ, ಶಿವರಾಜ್ ಕುಮಾರ್, ಅಬ್ದುಲ್ ಲತೀಫ್, ಪದ್ಮಾವತಿ, ಬಿ.ಎ.ಅಬ್ದುಲ್ ಮಜೀದ್, ಸೀತಾ, ಉಮ್ಮರ್ ಬೋರ್ಕಳ, ಅಶಾಲತಾ, ಗೀತಾ ಭಾಸ್ಕರ್, ಮಾಲತಿ, ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಅಧೀಕ್ಷಕ ಡಾ. ಕೆ.ಕೆ. ಶಾಂತಿ, ವರ್ಕಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ. ಅನಿಲ್ ಕುಮಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಡಿ. ಬೂಬ, ಜಯರಾಮ ಬಲ್ಲಂಗುಡೇಲ್, ಡಿ.ಎಂ.ಕೆ. ಮುಹಮ್ಮದ್, ಕೆ. ಮುಹಮ್ಮದ್, ಜಯಪ್ರಕಾಶ್ ಡಿಸೋಜಾ, ಡಿ. ದೂಮಪ್ಪ ಶೆಟ್ಟಿ, ಶರೀಫ್ ಪಾವೂರು, ಪಂಚಾಯತಿ ಯೋಜನಾ ಸಮಿತಿ ಅಧ್ಯಕ್ಷ ಮಹಮ್ಮದ್ ಮಜಲ್, ಸಿಡಿಎಸ್ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು.
ವರ್ಕಾಡಿ ಗ್ರಾ.ಪಂ.ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ವರ್ಕಡಿ ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಾ ವಂದಿಸಿದರು.




.jpg)
