HEALTH TIPS

ವಿವಾದಿತ ನರ್ತಕಿ ನಿಜವಾದ ಕಲಾಮಂಡಲಂ ಸತ್ಯಭಾಮೆಯಲ್ಲ: ಪ್ರತಿಕ್ರಿಯೆ ನೀಡಿದ ಪದ್ಮಶ್ರೀ ಕಲಾಮಂಡಲಂ ಸತ್ಯಭಾಮೆಯ ಮೊಮ್ಮಗ

               ಪಾಲಕ್ಕಾಡ್: ಜಾತಿ ನಿಂದನೆ ಮತ್ತು ವರ್ಣಭೇದ ಮಾತುಗಳ ಮೂಲಕ ಸುದ್ದಿಯಲ್ಲಿರುವ ವಿವಾದಿತ ಮೋಹಿನಿಯಾಟ್ಟಂ ಕಲಾವಿದೆ ಕಲಾಮಂಡಲ ಸತ್ಯಭಾಮಾ ವಿರುದ್ಧ ಕಲಾಮಂಡಲಂ ನೈಜ ಸತ್ಯಭಾಮಾ ಅವರ ಮೊಮ್ಮಗ ರಂಗಕ್ಕೆ ಬಂದಿದ್ದು ‘ಕಲಾಮಂಡಲಂ ಸತ್ಯಭಾಮಾ ಎಂದು ಕರೆಯಲಾಗುವ ಮಹಿಳೆ ನಿಜವಾದ ಸತ್ಯಭಾಮೆ ಅಲ್ಲ, ಆಕೆಯನ್ನು ಹೀಗೆ ಸಂಬೋಧಿಸಿರುವುದು ಕೇಳಿ ನೋವಾಗುತ್ತದೆ’ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

            ಶ್ರೀ ಕಲಾಮಂಡಲಂ ಸತ್ಯಭಾಮಾ ಅವರು ನಿಜವಾಗಿ ದೇಶದಿಂದ ಪದ್ಮಶ್ರೀ ಗೌರವಕ್ಕೆ ಪಾತ್ರರಾದವರು, ಕೇರಳ ಕಲಾಮಂಡಲದಿಂದ ಪ್ರಾಂಶುಪಾಲರಾಗಿ ನಿವೃತ್ತರಾಗಿ 2015 ರಲ್ಲಿ ನಿಧನರಾದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನರ್ತಕಿಯನ್ನು ಕಲಾಮಂಡಲಂ ಸತ್ಯಭಾಮಾ ಎಂದು ಸಂಬೋಧಿಸುತ್ತಿರುವುದನ್ನು ಕೇಳಿದಾಗ ಮನಸ್ಸಿಗೆ ನೋವಾಗುತ್ತದೆ ಎಂದ ಅವರು, ಯಾರೂ ತಪ್ಪು ತಿಳುವಳಿಕೆಗೆ ಒಳಗಾಗಬಾರದು ಎಂದಿರುವರು.

            ಸತ್ಯಭಾಮಾ ಅವರ ಹೆಸರಿನಲ್ಲಿ ನಡೆಯುತ್ತಿರುವ ಮೂಲ ಕಲಾಮಂಡಲಂ ಟ್ರಸ್ಟ್ ಕೂಡ ಸತ್ಯಭಾಮಾ ಜೂನಿಯರ್ ಅವರಿಗೆ ಸಂಬಂಧವಿಲ್ಲ ಎಂದು ಪ್ರಮಾಣಪತ್ರವನ್ನು ಬಿಡುಗಡೆ ಮಾಡಲಾಗಿದೆ. ‘ಕಲಾಮಂಡಲಂ ಸತ್ಯಭಾಮಾ’ ಎಂಬ ಹೆಸರನ್ನು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ವಾದ-ಪ್ರತಿವಾದಗಳಿಗೂ ನಿಜವಾದ ಪದ್ಮಶ್ರೀ ಕಲಾಮಂಡಲಂ ಸತ್ಯಭಾಮಾ ಟೀಚರ್‍ಗೂ ಅಥವಾ ಅವರ ಪರವಾಗಿ ಕೆಲಸ ಮಾಡುತ್ತಿರುವ ಟ್ರಸ್ಟ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಕೇರಳ ಕಲಾ ಸಮುದಾಯಕ್ಕೆ ತಿಳಿಸಲಾಗಿದೆ ಎಂದು ಅವರು ಪತ್ರವನ್ನು ಹಂಚಿಕೊಂಡಿದ್ದಾರೆ.

            ಮೊನ್ನೆ ಸತ್ಯಭಾಮಾ ಜೂನಿಯರ್ ಕಲಾಭವನ್ ಮಣಿ ಅವರ ಸಹೋದರ ಹಾಗೂ ಕಲಾವಿದ ಆರ್.ಎಲ್.ವಿ ರಾಮಕೃಷ್ಣನ್ ಅವರನ್ನು ಅವಮಾನಿಸುವಂತಹ ಟೀಕೆಗಳನ್ನು ಮಾಡಿದ್ದರು. ಮೋಹಿನಿಯಾಟ್ಟಂ ಮಾಡುವ ಪುರುಷರು ಸುಂದರವಾಗಿರಲು ಬಯಸುತ್ತಾರೆ ಮತ್ತು ಅವರನ್ನು ನೋಡಿದಾಗ ಅವರು ಕಾಗೆಯ ಬಣ್ಣವನ್ನು ಹೊಂದಿದ್ದಾರೆ ಎಂಬುದು ಸತ್ಯಭಾಮಾ ಜೂನಿಯರ್ ಅವರ ಟೀಕೆ. ಇದರ ವಿರುದ್ಧ ಕೇರಳದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿದ್ದವು. ಘಟನೆಯಲ್ಲಿ ಸತ್ಯಭಾಮಾ ಜೂನಿಯರ್ ವಿರುದ್ಧ ಮಾನವ ಹಕ್ಕುಗಳ ಆಯೋಗವೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries