ತಿರುವನಂತಪುರಂ: ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪ ಮಾಡಲಾಗಿದೆ.
ದೂರನ್ನು ಚುನಾವಣಾ ಆಯೋಗ ಸ್ವೀಕರಿಸಿದೆ. ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷ ಟಿಎನ್ ಪ್ರತಾಪನ್ ಅವರು ದೂರು ದಾಖಲಿಸಿದ್ದಾರೆ.
ಮುಖ್ಯಮಂತ್ರಿಗಳ ವಿಧಾನಸಭೆ ಭಾಷಣವನ್ನು ಕೇರಳದಾದ್ಯಂತ ಹಂಚಲಾಗುತ್ತಿದೆ ಎಂಬುದು ದೂರು. ರಾಜ್ಯ ಸರ್ಕಾರದ ಸಾಮಾನ್ಯ ಖಜಾನೆಯಿಂದ ಹಣ ಖರ್ಚು ಮಾಡಿ ಮುದ್ರಿಸಿದ ಮುಖ್ಯಮಂತ್ರಿಗಳ ವಿಧಾನಸಭೆ ಭಾಷಣವನ್ನು ಮನೆಮನೆಗೆ ಹಂಚಲಾಗುತ್ತದೆ. 16 ಪುಟಗಳ ಪುಸ್ತಕವನ್ನು ವಿತರಿಸಲಾಗಿದೆ. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚಮಾಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬುದು ದೂರು.





