ವಯನಾಡು: ಕಾಸರಗೋಡಿನಲ್ಲಿ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದ 7.25 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಕಾಸರಗೋಡು ಮೂಲದ ಅಬ್ದುಲ್ ರಜಾಕ್ ಮತ್ತು ಸುಲೈಮಾನ್ ಬಂಧಿತ ಆರೋಪಿಗಳು. ವಯನಾಡು ಪಜುಪತ್ತೂರಿನ ಖಾಸಗಿ ಹೋಂಸ್ಟೇಯಿಂದ ನಿನ್ನೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅಂಬಲತ್ತರ ಪರಪಲ್ಲಿ ಗುರುಪುರಂನಲ್ಲಿರುವ ಬಾಡಿಗೆ ಮನೆಯಲ್ಲಿ ಬುಧವಾರ ಸಂಜೆ 7.5 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮಾರುಕಟ್ಟೆಯಿಂದ ಹಿಂಪಡೆದಿದ್ದ 2000 ರೂಪಾಯಿಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ರಜಾಕ್ ಬಾಡಿಗೆ ಮನೆಯಲ್ಲಿ ವಾಸವಿದ್ದರು. ತನಿಖಾ ತಂಡ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸಿದ್ದು, ಸ್ವಿಚ್ ಆಫ್ ಆಗಿತ್ತು.
ಎರಡು ದಿನಗಳಿಂದ ಆತ ಸ್ವಸ್ಥಳದಲ್ಲಿ ಇರಲಿಲ್ಲ ಎಂಬ ಮಾಹಿತಿ ಪೋಲೀಸರಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೋಲೀಸರು ಮನೆ ತೆರೆದು ಶೋಧ ನಡೆಸಿದ್ದಾರೆ. ನೋಟುಗಳು ಗೋಣಿಚೀಲದಲ್ಲಿ ಪತ್ತೆಯಾಗಿದ್ದವು.


