HEALTH TIPS

ಹವ್ಯಕ ಮಹಾಮಂಡಲಾಂತರ್ಗತ ಮುಳ್ಳೇರಿಯ ಮಂಡಲ ಸಭೆ ಸಂಪನ್ನ

              ಕುಂಬಳೆ: ಮುಳ್ಳೇರಿಯಾ ಹವ್ಯಕ ಮಂಡಲ ಸಭೆ ಧರ್ಮತ್ತಡ್ಕದ ಗುಂಪೆ ವಲಯ ಕಛೇರಿಯಲ್ಲಿ ಜರಗಿತು. ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆಗೆ ಚಾಲನೆ ನೀಡಲಾಯಿತು. ಗಣೇಶ ಪಂಚರತ್ನ ಸ್ತೋತ್ರದೊಂದಿಗೆ ಆರಂಭವಾದ ಮಂಡಲ ಸಭೆಯ ಅಧ್ಯಕ್ಷತೆಯನ್ನು ಮುಳ್ಳೇರಿಯ ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಮಾಡಾವು ವಹಿಸಿದ್ದರು.

            ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ, ವರದಿ ವಾಚಿಸಿದರು. ಹೊಸನಗರ ಮಹಾನಂದಿ ಗೋಲೋಕದ ಸಂಚಾಲಕ ಕೆ.ಪಿ.ಎಡಪ್ಪಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಮಹಾನಂದಿ ಗೋಲೋಕದ ಮಾಹಿತಿಗಳನ್ನು ನೀಡಿ ಕೃಷ್ಣಾರ್ಪಣಂ, ವಿಷ್ಣು ಪದಮ್, ವಿಷ್ಣು ಸಹಸ್ರನಾಮ ಲೇಖನ ಯಜ್ಞ ಕಾರ್ಯಕ್ರಮಗಳ ಸಂಪೂರ್ಣ ವಿವರಗಳನ್ನು ನೀಡಿದರು. ವಿವಿಧ ವಲಯಗಳ ಪ್ರಧಾನರು ವಲಯದ ವರದಿಗಳನ್ನು ನೀಡಿದರು. ವೇಣುಗೋಪಾಲ ಕೆದ್ಲ ಭಾವರಾಮಾಯಣ ಚಂದಾದಾರನ್ನು ಹೆಚ್ಚಿಸಬೇಕಾದ ಅಗತ್ಯತೆಯನ್ನು ತಿಳಿಸಿ ಮಾಣಿಮಠದಲ್ಲಿ ಜರಗಿದ ವಾರ್ಷಿಕೋತ್ಸವ  ಕಾರ್ಯಕ್ರಮಗಳ ಲೆಕ್ಕಪತ್ರ ಮಂಡಿಸಿದರು. ಮಂಗಳೂರು ಪ್ರಾಂತ್ಯ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಮನೆ ಹಣದ ಮಹತ್ವ ಹಾಗೂ ಸಂಘಟನೆಯ ಮಹತ್ವವನ್ನು ತಿಳಿಸಿ ಶ್ರೀ ಗುರುಗಳ ಯೋಜನೆಗಳಿಗೆ ಎಲ್ಲಾ ವಲಯದವರು ಕೈಜೋಡಿಸಿ ಸಹಕರಿಸಬೇಕೆಂದು ತಿಳಿಸಿದರು.

             ಮಂಡಲ ಪ್ರಧಾನರು ವಿಭಾಗವಾರು ವರದಿಗಳನ್ನು ಸಲ್ಲಿಸಿದರು. ಅಧ್ಯಕ್ಷರು ಮಹಾಮಂಡಲ ಸುತ್ತೋಲೆಯ ವಿವರಗಳನ್ನು ನೀಡಿದರು. ಮಾರ್ಚ್ 16 ರಂದು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ಗುರಿಕಾರರ ಮಾರ್ಗದರ್ಶನ ಸಮಾವೇಶಕ್ಕೆ ಎಲ್ಲಾ ವಲಯಗಳ ಗುರಿಕಾರರು ಹಾಗೂ ಪದಾಧಿಕಾರಿಗಳು ಭಾಗವಹಿಸಬೇಕೆಂದು ಮಂಡಲ ಗುರಿಕಾರರಾದ ಮೊಗ್ರ ಸತ್ಯನಾರಾಯಣ ಭಟ್ ಆಹ್ವಾನ ನೀಡಿದರು. ಈಶಕುಮಾರ್ ಉಬರಡ್ಕ ಅವರು ಸ್ವರ್ಣ ಪಾದುಕೆಯ ಮಹತ್ವವನ್ನು ತಿಳಿಸಿ ವಿವಿಧ ವಲಯಗಳಲ್ಲಿ ಸ್ವರ್ಣ ಪಾದುಕಾ ಸಂಚಾರದ ಬಗ್ಗೆ ಮಾಹಿತಿಗಳನ್ನು ನೀಡಿದರು. ಮಹಾಮಂಡಲದಲ್ಲಿ ಜರಗಿದ ವಿದ್ಯಾರ್ಥಿ - ಯುವ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

            ಗುಂಪೆ ವಲಯದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಹಿರಿಯರಾದ ಬಾಯಾಡಿ ವೆಂಕಟ್ರಮಣ ಭಟ್ ಹಾಗೂ ಗೃಹಿಣಿಯಾಗಿದ್ದುಕೊಂಡು ಶೈಕ್ಷಣಿಕ ಸಂಸ್ಥೆಯ ಪ್ರಬಂಧಕರಾಗಿ ಅದರ ಅಭಿವೃದ್ಧಿಗೆ ಕೊಡುಗೆ ನೀಡಿದ ಶಾರದಾ ಅಮ್ಮ ನೇರೋಳು ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

           ಮಾತೃತ್ವಮ್ ಯೋಜನೆಯ ಮೂಲಕ ಲಕ್ಷ ಭಾಗಿನಿಯಾದ ಮಾಸದ ಮಾತೆ ಪ್ರಸನ್ನಾ ವಿ.ಚೆಕ್ಕೆಮನೆ ಅವರಿಗೆ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು. ಶ್ರೀ ಗುರುಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು ವಲಯಗಳಿಂದಲೇ ತಳಮಟ್ಟದ ಸಹಕಾರ ಅಗತ್ಯವಿದೆ. ಇದನ್ನರಿತು ಮಂಡಲದ ಎಲ್ಲಾ ವಲಯಗಳು ಸಹಕರಿಸಬೇಕೆಂದು ಕೃಷ್ಣಮೂರ್ತಿ ಮಾಡಾವು ಅಧ್ಯಕ್ಷತೆ ವಹಿಸಿ  ಕರೆ ನೀಡಿದರು. ವೇದಮೂರ್ತಿ ಪಂಜರಿಕೆ ಗಣಪತಿ ಭಟ್ಟರ ನೇತೃತ್ವದಲ್ಲಿ ಗಣಪತಿ ಹೋಮ, ಶಿವಪೂಜೆ, ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು. ರಾಮ ತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries