ಕಾಸರಗೋಡು: ಕಳವುಗೈದು ಸಾಗಿಸುತ್ತಿದ್ದ ಬೈಕಲ್ಲಿ ಸಂಚರಿಸುತ್ತಿದ್ದವರು ಹೆಲ್ಮೆಟ್ ಧರಿಸದಿರುವ ದೃಶ್ಯಾವಳಿ ಆರ್‍ಟಿಓ ವತಿಯಿಂದ ರಸ್ತೆಬದಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೆಲ್ಮೆಟ್ ರಹಿತ ಪ್ರಯಾಣಕ್ಕಾಗಿರುವ ದಂಡದ ಮೊತ್ತ ಬೈಕಿನ ಮಾಲಿಕಗೆ ಬಂದು ತಲುಪಿದೆ.
ಪಳ್ಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಬೈಕ್ ಮಾಲಿಕ ಎಂ. ಕುಮಾರನ್ ಅವರಿಗೆ ಈ ನೋಟೀಸು ಜಾರಿಗೊಳಿಸಲಾಗಿದೆ. ಹೆಲ್ಮೆಟ್‍ರಹಿತ ಪ್ರಯಾಣಕ್ಕಾಗಿ 1ಸಾವಿರ ರೂ. ದಂಡ ಪಾವತಿಸುವಂತೆ ಸೂಚಿಸಲಾಗಿದೆ. 2023 ಡಿ. 29ರಂದು ಪಳ್ಳಿಕೆರೆ ಗ್ರಾಪಂ ಕಚೇರಿ ಸನಿಹದಿಂದ ಬೈಕ್ ಕಳವಾಗಿದ್ದು, ನಂತರ ಬೇಕಲ ಠಾಣೆ ಪೊಲೀಸರು ನಡೆಸಿದ ಕಾಯಚರಣೆಯಲ್ಲಿ ಶಿವಮೊಗ್ಗದಿಂದ ಬೈಕನ್ನು ವಶಪಡಿಸಿಕೊಂಡಿದ್ದರು. ನ್ಯಾಯಲಯಕ್ಕೆ ಹಾಜರುಪಡಿಸಿದ ನಂತರ ಬೈಕನ್ನು ಮಾಲಿಕಗೆ ವಾಪಾಸುಮಾಡಲಾಗಿತ್ತು. ಇದಾಗಿ ಎರಡು ತಿಂಗಳ ನಂತರ ದಂಡ ಪಾವತಿಸುವಂತೆ ಕುಮಾರನ್ ಅವರಿಗೆ ಮೋಟಾರುವಾಹನ ಇಲಾಖೆಯ ನೋಟೀಸು ಕೈಸೇರಿದೆ.

