ಕಾಸರಗೋಡು: ಉಮ್ಮನ್‍ಚಾಂಡಿ ಮುಖ್ಯಮಂತ್ರಿಯಾಗಿದ್ದಾಗ ಕಾಸರಗೋಡಿನಲ್ಲಿ ಏಮ್ಸ್‍ಗಾಗಿ ಮನವಿ ಸಲ್ಲಿಸಿದ್ದ ಎಡರಂಗ ಶಾಸಕರು ಪಿಣರಾಯಿ ಮುಖ್ಯಮಂತ್ರಿ ಆದಾಗ ಕಾಸರಗೋಡಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂದು ಆಗ್ರಹಿಸಲು ಧೈರ್ಯವಿಲ್ಲವೆ. ಈ ಬಗ್ಗೆ ಉತ್ತರಿಸಬೇಕೆಂದು ಐಕ್ಯರಂಗ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಹೇಳಿದರು.
ಅವರು ಉದುಮದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಮತದಾರರು ಎಡರಂಗದ ದ್ವಿಮುಖ ನೀತಿಯನ್ನು ಅರ್ಥೈಸಿಕೊಳ್ಳಬೇಕು. ಈ ದ್ವಿಮುಖ ನೀತಿಯ ಮೂಲಕ ಎಡರಂಗ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಕಳೆದ ಐದು ವರ್ಷಕಾಲ ಸಂಸದ ಎಂಬ ನೆಲೆಯಲ್ಲಿ ಕಾಸರಗೋಡಿನಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ ಅವರು ನಾಡಿನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಮಂಡಿಸಿದ್ದಾಗಿಯೂ ಹೇಳಿದರು.
ಉದುಮ ಮಂಡಲ ಪರ್ಯಟನೆಯನ್ನು ಎಐಸಿಸಿ ಕಾರ್ಯನಿರ್ವಹಣ ಸಮಿತಿ ಸದಸ್ಯ ರಮೇಶ್ ಚೆನ್ನಿತ್ತಲ ಕಾನತ್ತೂರಿನಲ್ಲಿ ಉದ್ಘಾಟಿಸಿದರು. ಕಲ್ಲಟ್ರ ಮಾಹಿನ್, ಕೆ.ನೀಲಕಂಠನ್, ಪಿ.ಕೆ.ಫೈಝಲ್, ಎ.ಗೋವಿಂದನ್ ನಾಯರ್, ಬಾಲಕೃಷ್ಣನ್ ಪೆರಿಯ, ಹಕೀಂ ಕುನ್ನಿಲ್, ಕಲ್ಲಟ್ರ ಅಬ್ದುಲ್ ಖಾದರ್, ರಾಜನ್ ಪೆರಿಯ, ಕೆ.ಬಿ.ಮುಹಮ್ಮದ್ ಕುಂಞÂ, ಖಾದರ್ ಮಾಂಙõÁಡ್, ಸಾಜಿದ್ ಮವ್ವಲ್, ಗೀತಾ ಕೃಷ್ಣನ್, ಧನ್ಯ ಸುರೇಶ್, ಗೋಪಿನಾಥನ್ ನಾಯರ್, ಭಕ್ತವತ್ಸಲನ್, ಎ.ಬಿ.ಶಾಫಿ, ಕೆ.ಇ.ಎ.ಬಕರ್, ಶರೀಫ್ ಕಾಪ್ಪಿಲ್, ಮಿನಿ ಚಂದ್ರನ್ ಮೊದಲಾದವರು ಉಪಸ್ಥಿತರಿದ್ದರು.


