ಮುಳ್ಳೇರಿಯ: ಕಾರಡ್ಕ ಮುಂಡೋಳು ಶ್ರೀ ಮಹಾವಿಷ್ಣು ದುರ್ಗಾಪರಮೇಶ್ವರಿ ಶಾಸ್ತಾರ ದೇವಸ್ಥಾನದ ವಾರ್ಷಿಕ ಪಾಟು ಮಹೋತ್ಸವ ಎ.22 ರಿಂದ 27 ರ ವರೆಗೆ ನಡೆಯಲಿದೆ. ಎ.22 ರಂದು ಬೆಳಗ್ಗೆ 8 ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ರಾತ್ರಿ 7 ಕ್ಕೆ ದೀಪ ಪ್ರತಿಷ್ಠೆ, ಉಗ್ರಾಣ ತುಂಬಿಸುವುದು, ಅತ್ತಾಳ ಪೂಜೆ ನಡೆಯಲಿದೆ.
ಎ.23 ರಂದು ಬೆಳಗ್ಗೆ 8 ಕ್ಕೆ ವೀಳ್ಯದೆಲೆ ಅಡಿಕೆ ಕೊಡುವುದು, 10 ಕ್ಕೆ ಧ್ವಜಾರೋಹಣ, ಶ್ರೀ ಬಲಿ ಉತ್ಸವ, 11 ರಿಂದ ವಿವಿಧ ಪ್ರಾದೇಶಿಕ ಸಮಿತಿಗಳ ವತಿಯಿಂದ ಹೊರೆಕಾಣಿಕೆ ಮೆರವಣಿಗೆ ಬಳಿಕ ಶ್ರೀ ದುರ್ಗಾಪರಮೇಶ್ವರಿ ಮತು ಶಾಸ್ತಾರ ದೇವರ ಆಯುಧ ಪೂಜೆ, ಪಾಟು ಪೂಜೆ, 11.30 ಕ್ಕೆ ತುಲಾಭಾರ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ದೀಪಾರಾಧನೆ, ರಾತ್ರಿ 7 ಕ್ಕೆ ಶ್ರೀ ಬಲಿ ಉತ್ಸವ, 9 ಕ್ಕೆ ಮಹಾಪೂಜೆ, ಮಂಡಲ ಪೂಜೆ, ಆಯುಧ ಪೂಜೆ, ಪೂರಕ್ಕಳಿ ನಡೆಯಲಿದೆ.
ಎ.27 ರಂದು ಬೆಳಗ್ಗೆ ಕವಾಟೋದ್ಘಾಟನೆ, ಕಣಿ ದರ್ಶನ, ಅನ್ನಸಂತರ್ಪಣೆ, 9 ರಿಂದ ಶ್ರೀಭೂತಬಲಿ ಉತ್ಸವ, ಮಧ್ಯಾಹ್ನ ದೇವರ ಅವಭೃತ ಸ್ನಾನ, ಬಳಿಕ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮೇ 4 ರಂದು ಬೆಳಗ್ಗೆ 9 ರಿಂದ ಶ್ರೀ ಧೂಮಾವತಿ ದೈವ, ಶ್ರೀ ಪಡ್ಡೈ ಧೂಮಾವತಿ ದೈವಕೋಲ, ಶ್ರೀ ಮೂವಾಳಂಕುಯಿ ಚಾಮುಂಡಿ ದೈವದ ಕೋಲ ನಡೆಯಲಿದೆ.

