HEALTH TIPS

ಹೇಮಾ ಮಾಲಿನಿಗೆ ಅವಮಾನ ಆರೋಪ: ಸುರ್ಜೆವಾಲಾ, ಖರ್ಗೆಗೆ ಚುನಾವಣಾ ಆಯೋಗ ನೋಟಿಸ್

ವದೆಹಲಿ: ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ವಿರುದ್ಧ ಗೌರವವಿಲ್ಲದ, ಅನಾಗರಿಕ ಹಾಗೂ ಅಸಭ್ಯ ಪದ ಬಳಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಗೆ ಚುನಾವಣಾ ಆಯೋಗ ಮಂಗಳವಾರ ಶೋಕಾಸ್ ನೋಟಿಸ್‌ ನೀಡಿದೆ.

ಅಲ್ಲದೆ, ಸಾರ್ವಜನಿಕ ಭಾಷಣದ ಸಮಯದಲ್ಲಿ ಮಹಿಳೆಯರ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವ ಬಗ್ಗೆ ತನ್ನ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನೋಟಿಸ್ ನೀಡಿದೆ.

ಏ..11ರ ಸಂಜೆಯೊಳಗೆ ಉತ್ತರಿಸಬೇಕು ಎಂದು ಸುರ್ಜೇವಾಲ ಅವರಿಗೂ ಏ.12ರ ಸಂಜೆಯೊಳಗೆ ಉತ್ತರಿಸಬೇಕು ಎಂದು ಖರ್ಗೆ ಅವರಿಗೂ ಸೂಚಿಸಿದೆ.

ನಟಿ, ಸಂಸದೆ ಹೇಮಮಾಲಿನ ವಿರುದ್ಧ ಸುರ್ಜೇವಾಲ ಹೇಳಿದ್ದಾರೆ ಎನ್ನಲಾದ ವಿಡಿಯೊವನ್ನು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಚುನಾವಣಾ ಆಯೋಗಕ್ಕೂ ಬಿಜೆಪಿ ದೂರು ನೀಡಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries