ಮುಳ್ಳೇರಿಯ: ಪುತ್ರಿಯ ಮದುವೆ ಸಿದ್ಧತೆ ಮಧ್ಯೆ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದ ಘಟನೆ ಮುಳ್ಳೇರಿಯದಲ್ಲಿ ನಡೆದಿದೆ. ಮುಳ್ಳೇರಿಯ ಕಾರ್ಲೆ ನಿವಾಸಿ ರಾಜ ರಾವ್(51)ಆತ್ಮಹತ್ಯೆಗೈದವರು. ಪುತ್ರಿ ವಿವಾಹ ಮೇ. 2ರಂದು ಮುಳ್ಳೇರಿಯದ ಸಭಾಂಗಣವೊಂದರಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಬುಧವಾರ ಮಧುರಂಗಿ ಶಾಸ್ತ್ರ ನಿಗದಿಪಡಿಸಲಾಗಿತ್ತು. ಇದಕ್ಕೆ ಮೊದಲ ರಾತ್ರಿ ರಾಜ ರಾವ್ ಸ್ಕೂಟರಲ್ಲಿ ಮನೆಯಿಂದ ತೆರಳಿದವರು ನಾಪತ್ತೆಯಾಗಿದ್ದರು.
ಮೊಬೈಲ್‍ಗೆ ಕರೆಮಾಡಿದರೂ ಪ್ರಯೋಜನವಾಗದಿದ್ದಾಗ ಹುಡುಕಾಟದ ಮಧ್ಯೆ ಇವರ ಸ್ಕೂಟರ್ ದೇಲಂಪಾಡಿ ಸನಿಹ ರಸ್ತೆಬದಿ ಕಂಡುಬಂದಿದ್ದು, ರಸ್ತೆಯಿಂದ ಅನತಿ ದೂರದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





