ಮುಳ್ಳೇರಿಯ: ಐವತ್ತು ವರ್ಷಗಳ ಇತಿಹಾಸವಿರುವ (1974) ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆಯವರಿಂದ ಉದ್ಘಾಟಿಸಲ್ಪಟ್ಟ ಮುಳ್ಳೇರಿಯ ವೀರೇಂದ್ರ ನಗರದ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ಜೀರ್ಣಾವಸ್ಥೆಯಲ್ಲಿದ್ದು, ಇದರ ನವೀಕರಣ ಕಾರ್ಯಗಳನ್ನು ಪ್ರಾರಂಭಿಸುವ ಪ್ರಯುಕ್ತ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯ ಮೂಲಾಮ್ನಾಯ ಸರ್ವಜ್ಞ ಪೀಠಮ್ ಶ್ರೀ ಕಾಂಚೀ ಕಾಮಕೋಟಿ ಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯಶ್ರೀ ಶಂಕರವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಸೋಮವಾರ ಮುಂಜಾನೆ ಭೇಟಿ ನೀಡಿದರು.
ಅವರಿಗೆ ಋತ್ವಿಜರಿಂದ ವೇದಘೋಷÀದ ಮೂಲಕ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಶ್ರೀ ಗುರುಗಳು ಜೀರ್ಣೋದ್ಧಾರಗೊಳ್ಳಲಿರುವ ಮಂದಿರದ ಭೂಮಿಪೂಜೆ ನೆರವೇರಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಂದಿರವು ಇನ್ನು ಮುಂದೆ "ಕಾಂಚೀ ಕಾಮಕೋಟಿ ದುರ್ಗಾಪರಮೇಶ್ವರಿ ಭಜನ ಮಂದಿರ" ಎಂದು ಕರೆಯಲ್ಪಡುತ್ತದೆ ಮತ್ತು ನಮ್ಮ ಮಠದ ಎಲ್ಲಾ ಸಹಾಯ ಸಹಕಾರ ಇರುತ್ತದೆ ಎಂದು ಅನುಗ್ರಹಿಸಿ ಶುಭಹಾರೈಸಿ ಮಂತ್ರಾಕ್ಷತೆ ನೀಡಿದರು. ಮಂದಿರಕ್ಕೆ ಸಂಬಂಧಪಟ್ಟ ಕಾರ್ಯಕರ್ತರು ಮತ್ತು ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

.jpg)

