ಬದಿಯಡ್ಕ:ಬಹುಭಾಷಾ ವಿದ್ವಾಂಸ, ತುಳು ಭಾಷಾ ಸಂಶೋಧಕ ದಿ.ಪುಂಡೂರು ವೆಂಕಟರಾಜ ಪುಣಿಚಿತ್ತಾಯರ ಬದುಕು-ಸಾಧನೆಗಳು ಮಾಸದ ನೆನಪುಗಳಾಗಿವೆ. ಸರಳ ವ್ಯಕ್ತಿತ್ವ, ವಸ್ತು-ವಿಷಯಗಳ ಮಂಡನಾ ಶೈಲಿ, ಯಕ್ಷಗಾನ ಸಹಿತ ಕಲಾ ಪ್ರಕಾರಗಳಲ್ಲಿ ಅವರಿಗಿದ್ದ ಆಳವಾದ ಜ್ಞಾನ ಅಚ್ಚರಿಗೊಳಿಸುವಂತದ್ದು ಎಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರದ ನೇತೃತ್ವದಲ್ಲಿ ಬುಧವಾರ ಬದಿಯಡ್ಕ ವಳಮಲೆಯ ಇರಾ ಸಭಾ ಭವನದಲ್ಲಿ ನಡೆದ ಡಾ.ಪಿ.ವೆಂಕಟರಾಜ ಪುಣಿಚಿತ್ತಾಯರ ‘ಪುವೆಂಪು ನೆನಪು’ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗಡಿನಾಡಿನ ಇಂತಹ ಪ್ರತಿಭೆಯನ್ನು ತಡವಾಗಿಯಾದರೂ ಕರ್ನಾಟಕ ಸರ್ಕಾರ ಗುರುತಿಸಿ, ನೆನಪಿಸಿರುವುದು ಸ್ತುತ್ಯರ್ಹ. ಇನ್ನಷ್ಟು ಹಿರಿಯ ಚೇತನಗಳನ್ನು ನೆನಪಿಸುವ, ಅವರ ಸಾಧನೆಗಳನ್ನು ಪರಿಚಯಿಸುವ ಕಾರ್ಯಚಟುವಟಿಕೆಗಳು ನಡೆಯಬೇಕೆಂದು ಅವರು ತಿಳಿಸಿದರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಸಾಹಿತಿ, ಕವಿ, ನಿವೃತ್ತ ಉಪನ್ಯಾಸಕ ವಿ.ಬಿ.ಅರ್ತಿಕಜೆ ಅವರು ಮಾತನಾಡಿ, ದಿ.ಪುಣಿಚಿತ್ತಾಯರ ಪೂರ್ತಿ ಬದುಕು ಸಂಶೋಧನೆ, ಭಾಷಾಧ್ಯನಗಳಿಗೆ ಮೀಸಲಾಗಿತ್ತು ಎಂದು ತಿಳಿಸಿದರು. ತುಳು, ಕನ್ನಡ, ಸಂಸ್ಕøತ, ಆಂಗ್ಲ, ಮಲೆಯಾಳ, ಹಿಂದಿ ಸಹಿತ ಬಹುಭಾಷೆಗಳಲ್ಲಿ ಕೋವಿದರಾಗಿದ್ದ ಅವರು ಸದಾ ಸ್ಮರಣೀಯರು. ಸುಲಲಿತ ಬರಹಗಳ ಮೂಲಕ ಅವರ ಬರಹಗಳು ಜನಸಾಮಾನ್ಯರಿಗೂ ಪ್ರಿಯವಾಗಿದ್ದವು. ಆದರೆ ಇಂದು ಅವರ ಕೃತಿಗಳು ಲಭ್ಯವಾಗದಿರುವುದು ದುರ್ದೈವ ಎಂದರು.
ಕಸಾಪ ದ.ಕ.ಮಾಜಿ ಜಿಲ್ಲಾಧ್ಯಕ್ಷ, ಕಲ್ಕೂರತ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ನುಡಿನಮನ ಸಲ್ಲಿಸಿ ತುಳು ಭಾಷೆ, ಸಂಸ್ಕøತಿಯ ಹಿರಿಮೆ, ಪುಣಿಚಿತ್ತಾಯರ ಕೊಡುಗೆಗಳನ್ನು ಸ್ಮರಿಸಿದರು.
ದಿ.ಪುಣಿಚಿತ್ತಾಯರ ಕೃತಿಗಳ ಬಗ್ಗೆ ಉಪನ್ಯಾಸ ನೀಡಿದ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ, ಸಂಶೋಧಕ ಡಾ.ರಾಧಾಕೃಷ್ಣ ಬೆಳ್ಳೂರು ಮಾತನಾಡಿ, ಪುಣಿಚಿತ್ತಾಯರು ಮರೆಯಲ್ಲಿದ್ದ ತುಳು ಭಾಷಾ ಶ್ರೀಮಂತಿಕೆಯನ್ನು ಬೆಳಕಿಗೆ ತಂದವರು.ಮಲೆಯಾಳ, ತುಳು, ತಮಿಳು ಭಾಷೆಗಳು ಸಮಾನ ವಿಭಾಗಕ್ಕೆ ಸೇರಿದವು. ಅದರಿಂದ ಅವುಗಳೊಳಗೆ ಬಹಳಷ್ಟು ಸಾಮ್ಯಗಳಿವೆ. ಒಬ್ಬಂಟಿಯಾಗಿ ಪುಣಿಚಿತ್ತಾಯರು ನಡೆಸಿದ ಸಾಧನೆ ಅಪೂರ್ವವಾದುದು ಎಂದರು.
ಸಮಾರಂಭದಲ್ಲಿ ಹಿರಿಯ ವಿದ್ವಾಂಸ, ಯಕ್ಷಗಾನ ಅಥರ್Àಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರಿಗೆ ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೊಡಮಾಡುವ ವಿಶಿಷ್ಟ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಿ.ಅಧ್ಯಕ್ಷತೆ ವಹಿಸಿದ್ದರು. ಶ್ರೀಮದ್.ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ, ಶಾಸಕ ಎನ್.ಎ.ನೆಲ್ಲಿಕುನ್ನು, ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಗಮಕ ಕಲಾಪರಿಷತ್ತಿನ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್, ನಿವೃತ್ತ ಉಪನ್ಯಾಸಕ ಪುರುಷೋತ್ತಮ ಪುಣಿಚಿತ್ತಾಯ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಗಡಿನಾಡ ಸಾಂಸ್ಕøತಿಕ-ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ, ಕರ್ನಾಟಕ ಜಾನಪದ ಪರಿಷತ್ತು ಗಡಿನಾಡ ಘಟಕ ಕಾರ್ಯಾಧ್ಯಕ್ಷ ಝಡ್.ಎ.ಕಯ್ಯಾರ್, ಕನ್ನಡ ಭವನ ಸಂಸ್ಥಾಪಕ ವಾಮನ ರಾವ್ ಬೇಕಲ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ.ನಾಯ್ಕಾಪು, ಕಾರ್ಯನಿರತ ಪತ್ರಕರ್ತರ ಸಂಘದ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಸರ್ದಾರ್ ಪಟೇಲ್ ಸಾಂಸ್ಕøತಿಕ ಸಂಘದ ಅಧ್ಯಕ್ಷ ವೃಥ್ವಿರಾಜ್ ಶೆಟ್ಟಿ ಕುಂಬಳೆ, ಸ್ವಾಗತ ಸಮಿತಿ ಗೌರವ ಸಲಹೆಗಾರ ರಮಾನಾಥ ರೈ, ಸ್ವಾಗತ ಸಮಿತಿ ಸಂಯೋಜಕ ವಿಜಯರಾಜ ಪುಣಿಚಿತ್ತಾಯ ಪುಂಡೂರು ಉಪಸ್ಥಿತರಿದ್ದರು. ಪ್ರೊ.ಎ.ಶ್ರೀನಾಥ್ ಸ್ವಾಗತಿಸಿ, ವಂದಿಸಿದರು. ಸಂಘಟಕ ಕೃಷ್ಣ ಡಿ.ಬೆಳಿಂಜ ನಿರೂಪಿಸಿದರು.

.jpg)

.jpg)

