ಮುಳ್ಳೇರಿಯ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.28, 29ರಂದು ನಡೆಯಲಿರುವ ಶಿವಶಕ್ತಿ ಮಹಾಯಾಗದ `ಯಜ್ಞಮಂಟಪ' ನಿರ್ಮಾಣದ ಸಲುವಾಗಿ ಚಪ್ಪರ ನಿರ್ಮಾಣ ಸಮಿತಿಯ ನೇತೃತ್ವದಲ್ಲಿ ಭಾನುವಾರ ಮಡಲು ಹೆಣೆಯುವ ಕಾರ್ಯಕ್ರಮ ಆಯೋಜಿಸಲಾಯಿತು. ಊರಿನ ಹಿರಿಯ ವ್ಯಕ್ತಿಗಳಾದ ಚೋಮ (ಕುಂಞÂೀರನ್), ಗೋಪಾಲನ್ ನಾಯರ್ ಜೊತೆಯಾಗಿ ಮಡಲು ಹೆಣೆಯುವ ಮೂಲಕ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಸುನಿಲ್ ಪಿ.ಆರ್., ಗೋಪಾಲಾಚಾರಿ ಚಂದ್ರಂಪಾರೆ, ರವಿಶಂಕರ ವಾಲ್ತಾಜೆ, ರಾಮಚಂದ್ರ ವೋರ್ಕೂಡ್ಲು, ಸಂತೋಷ್ ಚಂದ್ರಂಪಾರೆ, ನಾರಾಯಣ ಪಿಲಿಕೂಡ್ಲು, ನಾರಾಯಣನ್ ನಾಯರ್, ಸೇತುನಾಥ್, ಉಣ್ಣಿಕೃಷ್ಣನ್, ರವಿ ಚಂದ್ರಂಪಾರೆ, ರಾಧಾಕೃಷ್ಣ ನಾಯ್ಕ್ ಬಾಲಡ್ಕ, ಸುಜಾತ ಶಶಿಧರನ್, ಶಾಂತಾ ನಾರಾಯಣ ಅರ್ಲಡ್ಕ ನೇತೃತ್ವವಹಿಸಿದ್ದರು.




.jpg)
