HEALTH TIPS

ಕುಂಬಳೆ ಉಪಜಿಲ್ಲಾ ಮಟ್ಟದ ಕೇರಳ ಶಾಲಾ ಕಲೋತ್ಸವ ಸಂಪನ್ನ

ಪೆರ್ಲ: ತುಳುನಾಡು ಸಾಂಸ್ಕøತಿಕ ಪರಂಪರೆಯ ನೆಲೆಬೀಡಾಗಿದೆ. ಕಾಸರಗೋಡು ಆನೇಕ ಕವಿಗಳು, ಕಲಾವಿದರನ್ನು ನಾಡಿಗೆ ಧಾರೆಯೆರೆದಿದೆ. ಕಲೋತ್ಸವವು ಅನೇಕ ಕಲಾವಿದರನ್ನು ನಾಡಿಗೆ ಸಮರ್ಪಿಸುವ ಉತ್ತಮ ವೇದಿಕೆಯಾಗಿದೆ ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿದರು.

ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ಸಂಜೆ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ 63ನೇ ಕೇರಳ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಲೋತ್ಸವದ ಸ್ಪರ್ಧೆಗಳಲ್ಲಿ ಯಾರಿಗೂ ಸೋಲಿಲ್ಲ. ಯಾರೂ ವಿಜಯಿಸುವುದೂ ಇಲ್ಲ. ಕಲೋತ್ಸವವು ಮಕ್ಕಳ ನಡುವಿನ ಸ್ಪರ್ಧೆಯಾಗಬೇಕೇ ಹೊರತು ಪೆÇೀಷಕರ ನಡುವಿನ ಸ್ಪರ್ಧೆಯಾಗಬಾರದು. ಜೀವನ ದಲ್ಲಿ ಆದರ್ಶ, ಸಂಸ್ಕಾರ, ಗುಣ ನಡತೆ, ಸೇವಾ ಸನ್ನದ್ಧತೆಯ ತಲೆಮಾರನ್ನು ರೂಪಿಸಲು ಕಲೋತ್ಸವ ಆಯೋಜಿಸಲಾಗುತ್ತಿದೆ ಎಂದರು.


ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೆÇಸಳಿಗೆ, ಎಣ್ಮಕಜೆ ಗ್ರಾಪಂ ಉಪಾಧ್ಯಕ್ಷೆ ರಮ್ಮ ಇಬ್ರಾಹಿಂ, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಶ್ಯಾಮಲ ಆರ್.ಭಟ್, ಶ್ರೀ ಶಾರದಾಂಬ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕಿ ಶಾರದಾ ವೈ., ಕುಂಬಳೆ ಬಿಆರ್‍ಸಿಯ ಬಿಪಿಸಿ ಜಯರಾಮ ಮಾತನಾಡಿದರು.

ಕೇರಳ ರಾಜ್ಯ ಶಾಲಾ ಒಲಿಂಪಿಕ್ಸ್ ಸ್ಪರ್ಧೆಯ 100 ಮೀಟರ್ ವಿಭಾಗದ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿ ನಿಯಾಸ್ ಅಹಮ್ಮದ್, ರಾಜ್ಯ ಸಬ್ ಜೂನಿಯರ್ ವಿಭಾಗದ ಕಬಡ್ಡಿ ಪಂದ್ಯಾವ ಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದ ಶೇಣಿ ಶಾಲಾ ವಿದ್ಯಾರ್ಥಿ ಅಭಿನವ್ ಎಸ್. ಅವರನ್ನು ಸನ್ಮಾನಿಸಲಾಯಿತು.

ಕುಬ್ಡಾಜೆ ಗ್ರಾಪಂ ಉಪಾಧ್ಯಕ್ಷೆ ಎಲಿಜಬೇತ್ ಕ್ರಾಸ್ತಾ, ಪ್ರಾಂಶುಪಾಲ ಶಾಸ್ತಾ ಕುಮಾರ್ ಎ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ, ರಾಧಾಕೃಷ್ಣನಾಯಕ್ ಜೆ.ಎಸ್., ಪಿಟಿಎ ಉಪಾಧ್ಯಕ್ಷ ಉಮ್ಮರ್ ಕಂಗಿನಮೂಲೆ, ಪೈಮರಿ ಎಚ್. ಎಂ. ಫಾರಂ ಸಂಚಾಲಕ ವಿಷ್ಣುಪಾಲ್, ಕಾರ್ಯಕ್ರಮ ಆಯೋಜಕ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಜನಪ್ರತಿನಿಧಿಗಳು, ಗಣ್ಯರು ಉಪಸ್ಥಿತರಿದ್ದರು. ಕುಂಬಳೆ ಎಇಒ ಶಶಿಧರ ಸ್ವಾಗತಿಸಿ, ಶೇಣಿ ಹೈಸ್ಕೂಲು ಮುಖ್ಯ ಶಿಕ್ಷಕ ಶ್ರೀಶ ಕುಮಾರ್ ಯಂ.ಪಿ. ವಂದಿಸಿದರು. ಶಿಕ್ಷಕ ಅಶ್ರಫ್ ಮತ್ರ್ಯ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries