ಅಗರ್ತಲಾ: ಬಾಂಗ್ಲಾದೇಶವು ತ್ರಿಪುರಾಗೆ ₹200 ಕೋಟಿ ವಿದ್ಯುತ್ ಬಾಕಿ ನೀಡಬೇಕಿದೆ ಎಂದು ಮುಖ್ಯಮಂತ್ರಿ ಮಾಣಿಕ್ ಸಹಾ ಸೋಮವಾರ ಇಲ್ಲಿ ತಿಳಿಸಿದರು.
ಬಾಕಿ ಉಳಿಸಿಕೊಂಡಿರುವ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
'ದಿನ ಕಳೆದಂತೆ ವಿದ್ಯುತ್ ಬಾಕಿ ಮೊತ್ತವು ಹೆಚ್ಚುತ್ತಿದೆ. ವಿದ್ಯುತ್ ಸರಬರಾಜಿಗೆ ಅಡ್ಡಿಯಾಗದಂತೆ ನೆರೆಯ ದೇಶವು ತಮ್ಮ ಬಾಕಿಯನ್ನು ಪಾವತಿಸಲಿದೆ ಎಂದು ನಾವು ಭಾವಿಸಿದ್ದೇವೆ' ಎಂದು ಸಹಾ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್‌ನೊಂದಿಗೆ ಎನ್‌ಟಿಪಿಸಿ ವಿದ್ಯುತ್ ವ್ಯಾಪಾರ್ ನಿಗಮ್ ಲಿಮಿಟೆಡ್ ಮೂಲಕ ತ್ರಿಪುರಾದ ಎಲೆಕ್ಟ್ರಿಸಿಟಿ ಕಾರ್ಪೊರೇಷನ್ ಲಿಮಿಟೆಡ್ ಮಾಡಿಕೊಂಡಿರುವ ಒಪ್ಪಂದದಂತೆ ನಿತ್ಯ 60-70 ಮೆಗಾವಾಟ್ ವಿದ್ಯುತ್ತನ್ನು 2016ರಿಂದಲೂ ಪೂರೈಸುತ್ತಿದೆ.





