ಕಾಸರಗೋಡು: ಟ್ಯಾಂಕರ್‍ನಲ್ಲಿ ಸಾಗಿಸುತ್ತಿದ್ದ ಖಾದ್ಯ ತೈಲ ಸೋರಿಕೆಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದ ರಸ್ತೆ ಸಂಪೂರ್ಣ ತೈಲಮಯವಾಗಿ ವಾಹನ ಸಂಚಾರಕ್ಕೆ ಅಡನೆಯುಂಟಾಗಿದೆ. ಬುಧವಾರ ರಾತ್ರಿ ಘಟನೆ ನಡೆದಿದೆ. ಮಂಗಳೂರು ಭಾಗದಿಂದ ಕಣ್ಣೂರಿಗೆ ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್‍ನಲ್ಲಿ ಸೋರಿಕೆಯುಂಟಾಗಿ ಕ್ಷಣಾರ್ಧದಲ್ಲಿ ರಸ್ತೆ ತುಂಬ ತೈಲ ತುಂಬಿಕೊಂಡಿದೆ. ಇದರಿಂದ ಬಾಕಿ ವಾಹನಗಳ ಸಂಚಾರಕ್ಕೆ ತಡೆಯುಂಟಾಗಿದೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ವಾಹನದಿಂದ ನೀರು ಹಾಯಿಸಿ ತೈಲ ಶುಚೀಕರಿಸಲು ಯತ್ನಿಸಿದರೂ, ಪ್ರಯೋಜನವಾಗದಿದ್ದಾಗ ಜೆಸಿಬಿ ಬಳಸಿ ರಸ್ತೆಯಿಂದ ತೈಲ ತೆರವುಗೊಳಿಸಲಾಯಿತು. ರಾತ್ರಿ 19ಕ್ಕೆ ಆರಂಭಗೊಮಡ ಕಾರ್ಯಾಚರಣೆ ಬೆಳಗಿನ ಜಾವದ ವರೆಗೂ ನಡೆಯಿತು.




