ಮುಳ್ಳೇರಿಯ: ಅಂಗನವಾಡಿ ಮಟ್ಟದಲ್ಲಿ ಕನ್ನಡ ಶಿಕ್ಷಣವನ್ನು ನಾಮಾವಶೇಷಗೊಳಿಸುವ ಹುನ್ನಾರದ ವಿರುದ್ಧ ಮತ್ತು ಅನರ್ಹರನ್ನು ಶಿಕ್ಷಕಿಯನ್ನಾಗಿ ನೇಮಿಸಲು ರ್ಯಾಂಕ್ ಲಿಸ್ಟ್ ತಯಾರಿಸಿದ ದೇಲಂಪಾಡಿ ಗ್ರಾಮ ಪಂಚಾಯತಿ ಆಡಳಿತ ಸಮಿತಿಯ ವಿರುದ್ಧ ಅಡೂರು ಕೋರಿಕಂಡ ಅಂಗನವಾಡಿ ಕನ್ನಡ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಾಳೆ(ಡಿ.13 ಶುಕ್ರವಾರ) ಬೆಳಿಗ್ಗೆ 10 ಕ್ಕೆ ಅಡೂರು ಪೇಟೆ ಪರಿಸರದಿಂದ ದೇಲಂಪಾಡಿ ಗ್ರಾಮ ಪಂಚಾಯತಿ ಪರಿಸರಕ್ಕೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಎಲ್ಲಾ ಕನ್ನಡ ಅಭಿಮಾನಿಗಳು ಮತ್ತು ಊರಿನ ಬಾಂಧವರು ಈ ಮೆರವಣಿಗೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

