ಕಾಸರಗೋಡು: 'ಕಾಳಜಿಯೂ-ಬೆಂಬಲವೂ' ಧ್ಯೇಯದೊಂದಿಗೆ ಕಾಸರಗೋಡಿನಲ್ಲಿ ಆಯೋಜಿಸಲಾದ ತಾಳೂಕುಮಟ್ಟದ ಅದಾಲತ್ ಪೂರ್ಣಗೊಂಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಸಂಪೂರ್ಣಗೊಂಡಾಗ ಆನ್‍ಲೈನ್ ಮೂಲಕ 1427 ದೂರುಗಳು ಲಭ್ಯವಾಗಿದೆ.
ಕಾಸರಗೋಡಿನಿಂದ 374, ಹೊಸದುರ್ಗದಿಂದ 524, ಮಂಜೇಶ್ವರದಿಂದ 265, ವೆಲ್ಲರಿಕುಂಡುನಿಂದ 264, ದೂರುಗಳು ಲಭಿಸಿವೆ. ಇದರಲ್ಲಿ 567 ದೂರುಗಳನ್ನು ಸಚಿವರು ಆದಾಲತ್ ನಲ್ಲಿ ಪರಿಗಣಿಸಿದ್ದಾರೆ. ಕಾಸರಗೋಡಿನಲ್ಲಿ ಒಟ್ಟು 123, ಹೊಸದುರ್ಗದಲ್ಲಿ 242, ಮಂಜೇಶ್ವರದಲ್ಲಿ 140, ವೆಳ್ಳರಿಕುಂಡು ತಾಲೂಕಿನಲ್ಲಿ 62 ದೂರುಗಳನ್ನು ಸಚಿವರುಗಳು ಪರಿಗಣಿಸಲಾಗಿದೆ.
ಅದಾಲv ನ ಭಾಗವಾಗಿ ವೆಲ್ಲರಿಕುಂಡ್ ನಿಂದ 128, ಮಂಜೇಶ್ವರದಿಂದ 114, ಹೊಸದುರ್ಗದಿಂದ 107, ಕಾಸರಗೋಡಿನಿಂದ 59 ಸೇರಿದಂತೆ ಕಾಸರಗೋಡು ಜಿಲ್ಲೆಯಿಂದ ಒಟ್ಟು 398 ಹೊಸ ದೂರುಗಳು ಲಭಿಸಿವೆ.




.webp)
