ಕುಂಬಳೆ: ಇಮಾಮ್ ಶಾಫಿ ಇಸ್ಲಾಮಿಕ್ ಅಕಾಡೆಮಿಯ ವಾರ್ಷಿಕ ಸಮಾವೇಶ (ಜಲ್ಸಾ: ಸೀರತ್ ಇಮಾಮ್ ಶಾಫಿ) ಜ. 23ರಿಂದ 25 ರ ವರೆಗೆ ಅಕಾಡೆಮಿ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ಮಂಗಳವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಝಿಯಾರತ್, ಧ್ವಜಾರೋಹಣ, ಕತ್ಮುಲ್ ಕುರಾನ್, ಥ್ರೆಡ್ ಎಕ್ಸ್‍ಪೋ, ಮಜ್ಲಿಸ್-ಎ-ಸುನ್ನೂರ್, ಇಷ್ಕ್ ಮಜ್ಲಿಸ್, ಮಹಲ್-ಪ್ರಸ್ಥಾನಿಕ ಸಂಗಮ, ಇಮಾಮ್ ಶಾಫಿಯವರ ಮೌಲಿದ್, ಧಾರ್ಮಿಕ ಪ್ರವಚನ, ಇಟ್ಟೀಸಾಲ್ ಮತ್ತು ಸಮಾರೋಪ ಸಭೆ ನಡೆಯಲಿದೆ. ಗುರುವಾರ (ಜ.23) ಬೆಳಿಗ್ಗೆ 9 ಕ್ಕೆ ಕೆ.ಕೆ. ಮಾಹಿನ್ ಮುಸ್ಲಿಯಾರ್ ಸಮಾರಂಭಕ್ಕೆ ನೇತೃತ್ವ ವಹಿಸಲಿದ್ದಾರೆ. ನಂತರ, ಮುಹಮ್ಮದ್ ಶಾಫಿ ಹಾಜಿ ಮೀಪಿರಿ ಧ್ವಜಾರೋಹಣ ನೆರವೇರಿಸುವರು. 9.45 ಕ್ಕೆ, ಮುಹಮ್ಮದ್ ಅರಬಿ ಹಾಜಿ ಅವರು ಥ್ರ್ರೆಡ್ ಆರ್ಟ್ ಎಕ್ಸ್‍ಪೋವನ್ನು ಉದ್ಘಾಟಿಸುವರು. ಸೈಯದ್ ಮುಹಮ್ಮದ್ ಮದನಿ ತಂಂಙಳ್ ನೇತೃತ್ವ ವಹಿಸುವರು. ಸಂಸ್ಥೆಯಿಂದ ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ 'ಹೋಮ್‍ಕಮಿಂಗ್' ಎಂಬ ಸಭೆ ಮಧ್ಯಾಹ್ನ 2 ಕ್ಕೆ ನಡೆಯಲಿದೆ. ಸಂಜೆ 7 ಕ್ಕೆ ಉದ್ಘಾಟನಾ ಸಭೆ ನಡೆಯಲಿದ್ದು, ಸೈಯದ್ ಕೆ.ಎಸ್. ಅಲಿ ತಂಙಳ್ ಕುಂಬೋಳ್ ಉದ್ಘಾಟಿಸುವರು. ಮುಹಮ್ಮದ್ ಸಅದಿ ಅಧ್ಯಕ್ಷತೆ ವಹಿಸುವರು. ಸೈಯದ್ ಎಂ.ಎಸ್. ತಂಙಳ್ ಮದನಿ ಓಲಮುಂಡ ಪ್ರಾರ್ಥನೆ ನೆರವೇರಿಸುವರು. ರಾತ್ರಿ 8 ಕ್ಕೆ ಖಾಫಿಲಾ ಬುರ್ದಾ ಸಂಗಮದ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ರಾತ್ರಿ 8.30 ಕ್ಕೆ ಇಷ್ಕ ಮಜ್ಲಿಸ್ ನಡೆಯಲಿದೆ. ಅನ್ವರ್ ಅಲಿ ಹುದವಿ ನೇತೃತ್ವ ವಹಿಸುವರು. ಗುರುವಾರ ಬೆಳಿಗ್ಗೆ 9.30 ಕ್ಕೆ ಮಜ್ಲಿಸ್-ಎ-ಸುನ್ನೂರ್ ಅನ್ನು ಎನ್.ಪಿ.ಎಂ ಜೈನುಲ್ ಆಬಿದೀನ್ ತಂಙಳ್ ಬುಖಾರಿ ಕುನ್ನುಂಗೈ ನೇತೃತ್ವ ವಹಿಸುವರು.
ಜ.24 ರಂದು ಸಂಜೆ 4 ಕ್ಕೆ ಮಹಲ್ ಪ್ರಸ್ಥಾನಿಕ ಸಂಗಮವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಮೂಸಾ ಹಾಜಿ ಕೊಹಿನೂರ್ ಅಧ್ಯಕ್ಷತೆ ವಹಿಸುವರು. ಸೈಯದ್ ಹಾದಿ ತಂಂಙಳ್ ಪ್ರಾರ್ಥನೆ ನಡೆಸುವರು. ಅಬ್ದುಲ್ ಮಜೀದ್ ಬಾಖವಿ ಕೊಡುವಳ್ಳಿ ಮುಖ್ಯ ಭಾಷಣ ಮಾಡುವರು. ಸಂಜೆ 7 ಕ್ಕೆ ಇಮಾಮ್ ಶಾಫಿ ಅವರ ಮೌಲೀದ್ ಮತ್ತು ರಾತೀಬ್ ಅಸ್ಮಾವುಲ್ ಹುಸ್ನಾ ನಡೆಯಲಿದೆ. ಸೈಯದ್ ಶರಫುದ್ದೀನ್ ತಂಙಳ್ ಪ್ರಾರ್ಥನೆ ನಡೆಸುವರು. ಸೈಯದ್ ಸಫ್ವಾನ್ ತಂಙಳ್ ಎಳಿಮಲ ನೇತೃತ್ವ ವಹಿಸುವರು. ಸಿಮ್ಸಾರುಲ್ ಹಕ್ ಹುದವಿ ಉಪನ್ಯಾಸ ನೀಡಲಿದ್ದಾರೆ. ಅಕ್ರಂ ಶೇಖ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎಥಿಸಲ್ ಕುಟುಂಬ ಸಭೆ ಮತ್ತು ಸಮಾರೋಪ ಸಮಾರಂಭ ಶನಿವಾರ ಬೆಳಿಗ್ಗೆ 10 ಕ್ಕೆ ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಡಾ. ಇಸುದ್ದೀನ್ ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸುವರು. ಸುದ್ದಿಗೋಷ್ಠಿಯಲ್ಲಿ ಕೆ.ಎಲ್. ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಮೂಸಾ ಹಾಜಿ ಕೊಹಿನೂರ್, ಅಬೂಬಕರ್ ಸಲೂದ್ ನಿಜಾಮಿ, ಪಿ.ವಿ. ಜುಬೈರ್ ನಿಜಾಮಿ, ಅಬ್ದುಲ್ ರಹಮಾನ್ ಹೈತಮಿ, ಅಲಿ ದಾರಿಮಿ, ಮತ್ತು ಖಲೀಲ್ ಅಸ್ಶಾಫಿ ಉಪಸ್ಥಿತರಿದ್ದರು.





