ಟೊಕಿಯೊ: ನೈಋತ್ಯ ಜಪಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಸಂಸ್ಥೆ ಸೋಮವಾರ ತಿಳಿಸಿದೆ.
ಮಿಯಾಜಾಕಿ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಇಲ್ಲಿನ ಕ್ಯುಶು ದ್ವೀಪ ಮತ್ತು ಸಮೀಪದ ಕೊಚಿ ಪ್ರದೇಶದಲ್ಲಿ ಸ್ಥಳೀಯ ಕಾಲಮಾನ 9.19ಕ್ಕೆ ಭೂಕಂಪನ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ ತೀವ್ರತೆ 6.9ರಷ್ಟು ದಾಖಲಾಗಿದೆ ಎಂದು ಅದು ತಿಳಿಸಿದೆ.
ಭೂಕಂಪದಿಂದ ಉಂಟಾದ ಹಾನಿ ಬಗ್ಗೆ ತಕ್ಷಣಕ್ಕೆ ಮಾಹಿತಿ ಇಲ್ಲ ಎಂದು ಹೇಳಿದೆ.




