ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಫೆಬ್ರವರಿ 2 ರಿಂದ 16ರ ತನಕ ನಡೆಯುವ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವದಿ ಉತ್ಸವದ ಅಂಗವಾಗಿ ವಾಹನ ಪ್ರಚಾರ ಜಾಥಾಕ್ಕೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ಅಧ್ಯಕ್ಷ ನಿತ್ಯಾನಂದ ಶೆಣೈ ಗುರುವಾರ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶಾಭಿಷೇಕ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ನಾರಂಪಾಡಿ, ಸೇವಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತಲೇಕ, ಕೋಶಾಧಿಕಾರಿ ಸೀತಾರಾಮ ಕುಂಜತ್ತಾಯ, ಪ್ರಚಾರ ಸಮಿತಿ ಅಧ್ಯಕ್ಷ ಕೆ. ಗಂಗಾಧರ್ ತೆಕ್ಕೇಮೂಲೆ, ಸಂಚಾಲಕ ಪ್ರಮೋದ್, ಬ್ರಹ್ಮಕಲಶಾಭಿಷೇಕ ಕಾರ್ಯದರ್ಶಿ ರವೀಂದ್ರ ರೈ, ಗಿರೀಶ್ ಮುಂಡೋಲುಮೂಲೆ, ಸುರೇಶ್, ಸುಧಾಮ ಗೊಸಾಡ, ಕೊಟ್ಟ ಬೆಳಚ್ಚಪ್ಪಾಡ ಮೊದಲಾದವರು ಭಾಗವಹಿಸಿದ್ದರು.




.jpg)
