ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ=ಮೂಡಪ್ಪ ಸೇವೆಯ ಅಂಗವಾಗಿ ಅಮ್ಮಂಗೋಡು ಶ್ರೀ ಶಬರೀನಾಥ ಭಜನಾ ಮಂದಿರದಲ್ಲಿ ಭಾನುವಾರ ಅಮ್ಮಂಗೋಡು ಶ್ರೀ ಶಬರೀನಾಥ ಭಜನಾ ಮಂದಿರ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಜರಗಿತು. ದಾಮೋದರ ಅಮ್ಮಂಗೋಡ್ ಅಧ್ಯಕ್ಷತೆ ವಹಿಸಿದ್ದರು. ರಾಜನ್ ಮುಳಿಯಾರು ಬ್ರಹ್ಮಕಲಶದ ಬಗ್ಗೆ ವಿವರಿಸಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರೂಪೀಕರಿಸಲಾಯಿತು. ನಾರಾಯಣ ಗುರುಸ್ವಾಮಿ , ಚಂದುನಾಯರ್, ಪ್ರಭಾಕರ ಮಾಸ್ತರ್, ವಾಮನ ಆಚಾರ್ಯ ಗೌರವಾಧ್ಯಕ್ಷರು, ದಾಮೋದರ ಬಿ ಅಧ್ಯಕ್ಷರು, ಕೃಷ್ಣ ಎ , ಬಾಲಕೃಷ್ಣ ಮೇಸ್ತ್ರಿ, ಪವಿತ್ರ, ಶಶಿಕುಮಾರ್ ಉಪಾಧ್ಯಕ್ಷರು, ಜನಾರ್ದನನ್ ನಾಯರ್ ಕಾರ್ಯದರ್ಶಿ, ತುಳಸಿಧರನ್ , ವಿನಯರಾಜ್ , ಪ್ರಕಾಶನ್, ಕೃಷ್ಣರಾಜ್ ಕೆ ವಿ ಜೊತೆ ಕಾರ್ಯದರ್ಶಿ, ಯನ್ ಪಿ ಉಪೇಂದ್ರ ಕೋಶಾಧಿಕಾರಿಯಾಗಿ ಮತ್ತು ಇತರ ಸದಸ್ಯರುಗಳನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಸಮಿತಿಯ ಪ್ರಧಾನ ಸಂಯೋಜಕರಾಗಿ ಕೃಷ್ಣನ್ ಅಮ್ಮಂಗೋಡ್ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ0ತರಿಸಲಾಯಿತು. ಆಯ್ಕೆ ಮಾಡಲಾದ ಪದಾಧಿಕಾರಿಗಳು ಜವಾಬ್ದಾರಿ ವಹಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತುಳಸಿ ಅಮ್ಮಂಗೋಡು ಸ್ವಾಗತಿಸಿ, ಜನಾರ್ಧನನ್ ವಂದಿಸಿದರು.




.jpg)
.jpg)
