ಕೊಚ್ಚಿ: ಆಧುನಿಕ ಆಹಾರ ಪದ್ಧತಿ ದೇಶ ಎದುರಿಸುತ್ತಿರುವ ಪ್ರಮುಖ ಆರೋಗ್ಯ ಬೆದರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಕೊಚ್ಚಿಯ ಕೇಂದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ನಿನ್ನೆ ನೀಡಿದ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಭಾರತೀಯರಲ್ಲಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಸಂಸ್ಕರಿಸಿದ ಆಹಾರಕ್ಕಾಗಿ ತಮ್ಮ ಮನೆಯ ಬಜೆಟ್‍ನ ಹತ್ತು ಪ್ರತಿಶತವನ್ನು ಮೀಸಲಿಡುವ ಅನೇಕ ಜನರಿದ್ದಾರೆ. ಅತಿಯಾಗಿ ಸೇವಿಸುವುದÀರಿಂದ ಉಂಟಾಗುವ ಸಮಸ್ಯೆಗಳ ಜೊತೆಗೆ, ಪೌಷ್ಟಿಕಾಂಶದ ಕೊರತೆಗಳು ಸಹ ನಮ್ಮನ್ನು ಕಾಡುತ್ತಿವೆ. ಮಧುಮೇಹ ಸೇರಿದಂತೆ ಜೀವನಶೈಲಿ ಕಾಯಿಲೆಗಳು ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಎಂದು ಅವರು ಹೇಳಿದರು.





