ಕಾಸರಗೋಡು: ಶ್ರೀಧರ್ಮಸ್ಥಳ ಮೇಳಮೇಳವೊಂದರಲ್ಲೇ 50ನೇ ವರುಷದ ತಿರುಗಾಟದಲ್ಲಿರುವ ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತ, ಸಿರಿಬಾಗಿಲು ಪ್ರತಿಷ್ಠಾನದ ಅದ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಹಿರಿಯ ಕಲಾವಿದ ವಸಂತ ಗೌಡ ಕಾಯರ್ತಡ್ಕ, ಹಾಗು ಶರತ್ ಶೆಟ್ಟಿ ತೀರ್ಥಹಳ್ಳಿ ಇವರನ್ನ ಕುಂದಾಪುರ ತಾಲೂಕಿನ ಇಡೂರು ಕಞËಡಿಯಲ್ಲಿ ಸನ್ಮಾನಿಸಲಾಯಿತು.
ಅವರು ಸೇವಾಕರ್ತರಾದ ಗೋವಾದಲ್ಲಿ ಉದ್ಯಮಿ ಯಾಗಿರುವ ಶ್ರೀ ಆನಂದ ಶೆಟ್ಟಿ ಕೇದಿಗೆ ಮನೆ ದಂಪತಿ, ಗಣ್ಯರು ಸೇರಿ ಕಲಾವಿದರನ್ನು ಗೌರವಿಸಿದರು. ಶ್ರೀಧರ್ಮಸ್ಥಳ ಮೇಳದ ಮೇನೇಜರ್ ಗಿರೀಶ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.





