ಕಾಸರಗೋಡು: ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾ ಸಂಘದ ದೇಶೀಯ ಸಮ್ಮೇಳನ 2025 ಜನವರಿ 28ರಿಂದ 30ರ ವರೆಗೆ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದಲ್ಲಿ ಜರಗಲಿದೆ. ಭಾರತದ 13 ರಾಜ್ಯಗಳಿಂದ 600 ರಷ್ಟು ಪ್ರತಿನಿಧಿಗಳು ಭಾಗವಹಿಸುವ ಸಮ್ಮೇಳನದಲ್ಲಿ ಸಂಘದ ನೇತಾರರು ಮತ್ತು ದೇಶೀಯ ಹಾಗೂ ಪ್ರಾದೇಶಿಕ ಗಣ್ಯವ್ಯಕ್ತಿಗಳು ಪಾಲ್ಗೊಳ್ಳುವರು.
ಸಮ್ಮೇಳನಕ್ಕೆ ಕಾಸರಗೋಡು ಜಿಲ್ಲೆಯಿಂದ ಮಹಿಳೆಯರು ಸೇರಿದಂತೆ 40ಮಂದಿ ಪ್ರತಿನಿಧಿಗಳು ಭಾಗವಹಿಸ ಬಗ್ಗೆ ಚಂದ್ರಗಿರಿಯಲ್ಲಿ ನಡೆದ ಸಂಘದ ಜಿಲ್ಲಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘದ ದೇಶೀಯ ಅಧ್ಯಕ್ಷ ಸಿ. ಎಚ್. ಸುರೇಶ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಾಲಕೃಷ್ಣ ಮಲ್ಲಿಗೆ ಮಾಡು ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ದಯಾನಂದ ಮುಜುಂಗಾವು, ಉಪಾಧ್ಯಕ್ಷೆ ಉಮಾದೇವಿ, ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ರವೀಂದ್ರನ್ ನಾಯರ್, ಎ.ಮುರಳಿಧರನ್, ಬಾಲಚಂದ್ರ ಕೂಡ್ಲು, ಶ್ರೀಮತಿ ಬೇಬಿ, ಚಂದ್ರು, ಸತೀಶ್, ಕುಞಂಬು ನಾಯರ್, ಜಿ. ದಿವಾಕರನ್, ಶ್ರೀಕಾಂಠನ್ ನಾಯರ್, ಮಾಧವ ಭಟ್, ಬಾಲಕೃಷ್ಣ. ಕೆ., ರಾಮಚಂದ್ರ ಮಾಸ್ಟರ್. ಎಂ. ಸುಮನಾ ಟೀಚರ್, ಶ್ರೀಕಾಂತ್ ಭಟ್ ಮುಂತಾದವರು ಸಂಘಟನಾ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಕಾರ್ಯದರ್ಶಿ ಜಯೇಂದ್ರ ಸಿ. ಎಚ್. ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಮಾಧವನ್ ನಾಯರ್ ವಂದಿಸಿದರು.

