ಮುಳ್ಳೇರಿಯ: ಮುಳಿಯಾರು ಪೇರಡ್ಕದ ಮಹಾತ್ಮಜಿ ಗ್ರಂಥಾಲಯ ಆವರಣದಲ್ಲಿ ಪಯಸ್ವಿನಿ ಅರಣ್ಯ ಸಂರಕ್ಷಣಾ ಸಮಿತಿಯ ಸಾಮಾನ್ಯ ಸಭೆ ಭಾನುವಾರ ನಡೆಯಿತು. ಮುಳಿಯಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಮಿನಿ ಪಿ.ವಿ. ಉದ್ಘಾಟಿಸಿದರು. ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ. ಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅರಣ್ಯಾಧಿಕಾರಿ ವಿನೋದ್ ಕುಮಾರ್ ಸಿ.ವಿ. ವಿಷಯ ಮಂಡಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎ. ಜನಾರ್ದನನ್, ಸಾಮಾಜಿಕ ಅರಣ್ಯ ಅಧಿಕಾರಿ ಎನ್.ವಿ. ಸತ್ಯನ್, ರಮೇಶನ್ ಕೆ.ಎನ್., ಬಾಬು ಕೆ.ಎ., ಮಹಾತ್ಮಜಿ ಗ್ರಂಥಾಲಯ ಅಧ್ಯಕ್ಷ ರಘು. ಕೆ ಮಾತನಾಡಿದರು. ವರದಿ ಪ್ರಸ್ತುತಿ ಮತ್ತು ಆದಾಯ ಮತ್ತು ವೆಚ್ಚದ ಲೆಕ್ಕಪತ್ರವನ್ನು ಸುನಿಲ್ ಎ.ಕೆ. ಪ್ರಸ್ತುತಪಡಿಸಿದರು. ಶಾಂತಕುಮಾರಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಯಸ್ವಿನಿ ಅರಣ್ಯ ಸಂರಕ್ಷಣಾ ಸಮಿತಿಯ 2025-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪಿ. ರಾಧಾಕೃಷ್ಣನ್ (ಅಧ್ಯಕ್ಷರು), ಶಾಂತಕುಮಾರಿ (ಉಪಾಧ್ಯಕ್ಷರು) ಮತ್ತು ಕೆ. ಗೋಪಾಲನ್, ರವೀಂದ್ರನ್ ಮದತುಂಗಲ್, ಬಾಲಕೃಷ್ಣನ್ ಪಾನೂರ್, ಮಧುಸೂದನನ್ ಪೇರಡ್ಕ, ಸತ್ಯನ್ ಕೆ, ಗೌರಿ ಮತ್ತು ಮೋಹಿನಿ ಅವರನ್ನೊಳಗೊಂಡ ಒಂಬತ್ತು ಸದಸ್ಯರ ಸಮಿತಿ ಅಧಿಕಾರ ವಹಿಸಿಕೊಂಡಿತು.




