ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ದೇವಸ್ಥಾನದೊಳಗಿಂದ ಗ್ರಾಮಪಂಚಾಯಿತಿ ಸದಸ್ಯೆಯ ಬೆಲೆಬಾಳುವ ಮೊಬೈಲ್ ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಣ್ಮಕಜೆ ಪಂಚಾಯಿತಿ ಪೆರ್ಲ ಸನಿಹದ ವಾಣೀನಗರ ನಿವಾಸಿ ಉಮ್ಮರ್ ಯಾನೆ ಉಮ್ಮರ್ ಫಾರೂಕ್(50)ಬಂಧಿತ.
ಕಣಿಪುರ ಉತ್ಸವದ ಸಂದರ್ಭ ಕುಂಬಳೆ ಗ್ರಾಮ ಪಂಚಾಯಿತಿ ಸದಸ್ಯೆ ವಿದ್ಯಾ ಪೈ ಅವರ ಬೆಲೆಬಾಳುವ ಮೊಬೈಲ್ ಕಳವಾಗಿತ್ತು. ಈ ಬಗ್ಗೆ ವಿದ್ಯಾ ಪೈ ಕುಂಬಳೆ ಠಾಣೆಗೆ ದೂರು ನಿಡಿದ್ದರು. ಪೊಲೀಸರು ದೇವಾಲಯದ ಸಿಸಿ ಕ್ಯಾಮರಾ ದೃಶ್ಯವಳಿ ತಪಾಸಣೆ ನಡೆಸಿದಾಗ ವ್ಯಕ್ತಿಯೊಬ್ಬ ದೇವಾಲಯದೊಳಗೆ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿರುವುದು ಹಾಗೂ ಅಲ್ಪ ಹೊತ್ತಿನಲ್ಲಿ ಅಲ್ಲಿಂದ ಪರಾರಿಯಾಗಿರುವುದು ದೃಶ್ಯದಲ್ಲಿ ಸೆರೆಯಾಗಿತ್ತು. ಈತನ ಬಗ್ಗೆ ತಪಾಸಣೆ ನಡೆಸಿದಾಗ ಈತ ಬದಿಯಡ್ಕ, ಮಂಜೇಶ್ವರ ಠಾಣೆಗಳಲ್ಲಿ ಕಳವುಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಬಗ್ಗೆ ಮಾಹಿತಿ ಲಭಿಸಿತ್ತು.

